", "articleSection": "Government,Agriculture", "image": { "@type": "ImageObject", "url": "https://prod.cdn.publicnext.com/s3fs-public/286525-1757345171-WhatsApp-Image-2025-09-08-at-8.56.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಈ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಗಣೇಶ ಉತ್ಸವದ ಸಂಭ್ರಮ ಮುಕ್ತಾಯ ಕಂಡಿದ್ದು, ಭಕ್ತರಿಂದ ಪೂಜಿಸಲ್ಪಟ್ಟ ಗಣೇಶನ ರುಂಡ, ಮುಂಡ, ಕೈ, ...Read more" } ", "keywords": "Hubballi Ganesh immersion, Ganesh idol clay composition, eco-friendly Ganesh idols, idol immersion issues, clay Ganesh idols, Ganesh festival problems, Hubballi news, Ganesh Chaturthi celebrations ", "url": "https://dashboard.publicnext.com/node" } ಹುಬ್ಬಳ್ಳಿ : ಗಣೇಶನಿಗೆ ಕಷ್ಟ ! ನೀರಲ್ಲಿ ಕರಗದೆ ಮಣ್ಣು ಸೇರಿದ ರುಂಡ, ಮುಂಡ, ಪಾದ, ಕೈ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗಣೇಶನಿಗೆ ಕಷ್ಟ ! ನೀರಲ್ಲಿ ಕರಗದೆ ಮಣ್ಣು ಸೇರಿದ ರುಂಡ, ಮುಂಡ, ಪಾದ, ಕೈ

ಹುಬ್ಬಳ್ಳಿ : ಈ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಗಣೇಶ ಉತ್ಸವದ ಸಂಭ್ರಮ ಮುಕ್ತಾಯ ಕಂಡಿದ್ದು, ಭಕ್ತರಿಂದ ಪೂಜಿಸಲ್ಪಟ್ಟ ಗಣೇಶನ ರುಂಡ, ಮುಂಡ, ಕೈ, ಪಾದ ನೀರಿನಲ್ಲಿ ಕರಗುವ ಮುನ್ನ ಬೇಕಾಬಿಟ್ಟಿಯಾಗಿ ಬಿದ್ದಿವೆ.

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಪ್ರತಿಷ್ಠಾಪನೆಯಾಗಿ ಭಕ್ತರ, ಕಷ್ಟ ಕಾರ್ಪಣ್ಯ ಕೇಳಿದ ಗಣೇಶ. ಮಹಾನಗರ ಪಾಲಿಕೆ ಬಾವಿಯೊಳಗೆ ಬಿದ್ದಿದ್ದು, ಕೆಲ ಮೂರ್ತಿಗಳು ಇನ್ನೂ ಮುಳುಗುವ ಹಂತದಲ್ಲಿದ್ದರೇ, ಆದಾಗಲೇ ಎಷ್ಟೋ ಮೂರ್ತಿಗಳು ಅರ್ಧಂಬರ್ಧ ಮುಳುಗಿ ಮೇಲೆದ್ದೂ ಮೂಲೆ ಸೇರಿವೆ.

ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಾವಿಯೊಳಗೆ ವಿಸರ್ಜಿಸಿದ ಗಣೇಶ ಮೂರ್ತಿಗಳ ನಿರ್ವಹಣೆ ಮತ್ತು ವಿಲೇವಾರಿಗೆ 77 ಬಾವಿ ಟೆಂಡರ್'ಗೆ ಒಳಪಟ್ಟಿವೆ.

ಈ ಟೆಂಡರ್ ಸೇರಿದ ಬಾವಿಯಲ್ಲಿನ ಗಣೇಶ ಮೂರ್ತಿಗಳ ವಿಲೇವಾರಿ, ನಿರ್ವಹಣೆ ಪ್ರಕ್ರಿಯೆ ಹೇಗೆ ನಡೀತಾ ಇದೆ ? ಎಂಬುದನ್ನು ಗಮನಿಸಲು ಸ್ಥಳದಲ್ಲಿ ಯಾವ ಅಧಿಕಾರಿ ಕಾಣಲೇ ಇಲ್ಲಾ.

ಹಿಂದೂ ಧರ್ಮದ ಪವಿತ್ರ ಹಬ್ಬ ಎಂದೇ ಖ್ಯಾತಿ ಪಡೆದ, ಗಣೇಶ ಚತುರ್ಥಿ ಮೂರ್ತಿ ವಿಸರ್ಜನೆ ಬಳಿಕ ಮೂರ್ತಿ ಕರಗುವ ಮುನ್ನವೇ ಮೇಲೆತ್ತಿ ಇಡಲಾಗಿದ್ದು, ನಾವು-ನೀವೂ ಪೂಜಿಸಿದ ಗಣೇಶನ ಪಾದ, ಆರ್ಶಿವಾದ ಕೇಳಿದ ಕೈ, ಭಕ್ತರನ್ನು ನೋಡಿದ ಗಣಪನ ಮುಖ ಕರಗದೇ ಬಾವಿ ಬಿಟ್ಟು ಪಕ್ಕ ಮಣ್ಣಿನಲ್ಲೇ ಬಿದ್ದಿದೆ.

ಇನ್ನೂ ಕೆಲ ಚಿಕ್ಕ-ಚಿಕ್ಕ ಮೂರ್ತಿಗಳ ನಿರ್ವಹಣೆ ನಡೆದಿವೆ, ಗಣೇಶ ಮೂರ್ತಿಯಷ್ಟೇ ಪ್ರಮುಖವಾಗಿ ಪ್ಲ್ಯಾಸ್ಟಿಕ್, ಕಸ, ತ್ಯಾಜ್ಯ, ಕಟ್ಟಿಗೆ, ಹಾರ ಪೂಜಾ ಸಾಮಾಗ್ರಿಗಳು ಮಾತ್ರ ಬಾವಿಯಲ್ಲೇ ಇವೆ.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 08:56 pm

Cinque Terre

135.9 K

Cinque Terre

11

ಸಂಬಂಧಿತ ಸುದ್ದಿ