ಮಂಡ್ಯ: ಉತ್ತಮ ಕಥಾನಕ ವಸ್ತುವಾದ ಮಂಡ್ಯ ಸೊಗಡಿನಲ್ಲಿ ಮೂಡಿಬಂದಿರುವ ``ಓಂ ಶಿವಂ' ಚಲನಚಿತ್ರ ಇದೇ ಸೆಪ್ಟೆಂಬರ್ 5 ರಂದು ರಾಜ್ಯಾದ್ಯಂತ ಬಿಡುಗಡೆ ಗೊಳ್ಳಲಿದೆ.
ಇಂದು ಮಂಡ್ಯದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಚಿತ್ರ ನಿರ್ದೇಶಕ ಅಲ್ವಿನ್, ದೀಪಾ ಫಿಲಂಸ್ ನಲ್ಲಿ ಮೂಡಿ ಬಂದಿರುವ ಕೆ.ಎನ್.ಕೃಷ್ಣ ನಿರ್ಮಿಸುತ್ತಿರುವ ಓಂ ಶಿವಂ ಚಲನಚಿತ್ರದ ಚಿತ್ರೀಕರಣ ಮಂಡ್ಯ ಜಿಲ್ಲೆಯಲ್ಲಿಯೇ ಬಹುತೇಕ ನಡೆದಿದ್ದು, ಉಳಿದಂತೆ ಮೈಸೂರು,ಮಂಗಳೂರು, ಬೆಂಗಳೂರು ಮತ್ತು ಕೃಷ್ಣಗಿರಿಯಲ್ಲಿ ಸತತ 45 ದಿನಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ ಎಂದರು.
ಸೆನ್ಸಾರ್ ಮಂಡಳಿಯಿಂದ Uಮತ್ತುA ಸರ್ಟಿಫಿಕೇಟ್ ಪಡೆದಿದ್ದು, ಭಾರ್ಗವ್ ಕೃಷ್ಣ ನಾಯಕನ ಪಾತ್ರದಲ್ಲಿರುವ ಚೊಚ್ಚಲ ಚಿತ್ರ ಇದಾಗಿದ್ದು, ವಿರಾನಿಕಾ ನಾಯಕಿಯಾಗಿ, ರವಿಕಾಳೆ, ರೋಬೋಶಂಕರ್ ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವರ್ಧನ್ ಅವರು ಪ್ರಮುಖ ಪಾತ್ರಗಳಲ್ಲಿ, ಲಕ್ಷ್ಮಿಸಿದ್ದಿಯ, ಅಪೂರ್ವಶ್ರೀ, ಬಾಲರಾಜ್ ವಾಡಿ, ಉಕ್ರಂ ರವಿ, ವರ್ಧನ್, ರೋಬೋಗಣೇಶ್,ಹನುಮಂತೇಗೌಡ, ಲಕ್ಷ್ಮಿರಾಮ್ ಮೊದಲಾದವರು ನಟಿಸಿದ್ದಾರೆ. ಛಾಯಾಗ್ರಹಣದಲ್ಲಿ ವೀರೇಶ್ ಎನ್ ಡಿಎ, ಸಂಗೀತ ಸಂಯೋಜನೆ ವಿಜಯ್ ಯರ್ಡ್ಸಿ ಮಾಡಿದ್ರೆ, ಸತೀಶ್ ಸಂಕಲನ ಮಾಡಿದ್ದಾರೆ, ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಕೌಸ್‌ಪೀರ್ ಹಾಡುಗಳನ್ನು ರಚಿಸಿದ್ರೆ ವಿ.ನಾಗೇಶ್ ನೃತ್ಯದ ಅನುಕ್ರಮ ವಿನ್ಯಾಸ, ಕೌರವ ವೆಂಕಟೇಶ್ ಸಾಹಸ ವಿನ್ಯಾಸ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಮಂಡ್ಯದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ನಟನೆಯ ಅವಕಾಶಗಳನ್ನು ನೀಡಲಾಗಿದೆ ಎಂದರು.
PublicNext
01/09/2025 07:49 pm