ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಇಂದು ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಮನೆಮಾಡಿದ್ದು ಕಡುಂಬುಟ್ಟು ಹಂದಿ ಮಾಂಸದ ಘಮ ಪಸರಿಸಿದೆ.
ಸೆಪ್ಟೆಂಬರ್ ತಿಂಗಳು ಬಂತು ಅಂದ್ರೆ ಸಾಕು ಕೊಡಗು ಜಿಲ್ಲೆಯ ಮನೆ ಮನೆಗಳಲ್ಲಿ ಹಂದಿ ಮಾಂಸ ಹಾಗೂ, ಕಡುಬುಂಟು ಘಮಘಮಿಸುತ್ತದೆ. ಯಾಕಂದ್ರೆ ಅದು ಕೈಲ್ ಮುಹೂರ್ತ ಹಬ್ಬದ ವಿಶೇಷ..
ಕೊಡಗಿನ ಆಯುಧ ಪೂಜೆ ಎಂದೇ ಕರೆಯಲ್ಪಡುವ ಈ ಕೈಲ್ ಮುಹೂರ್ತ ಹಬ್ಬವನ್ನ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿಯೂ ಇದನ್ನ ಆಚರಿಸುವುದು ಇಲ್ಲಿನ ವಾಡಿಕೆ. ಕೃಷಿಗೆ ಪ್ರಧಾನ ಆದ್ಯತೆ ನೀಡಿರುವ ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಕೆಯಾದ ಉಪಕರಣಗಳಿಗೆ ಪೂಜೆ ಸಲ್ಲಿಸಿ ಈ ಹಬ್ಬವನ್ನ ಪ್ರಾರಂಭಿಸಲಾಗುತ್ತದೆ.
ಇನ್ನು ಇಲ್ಲಿ ಹಿರಿಯರು, ಮಕ್ಕಳು, ಮಹಿಳೆಯರು, ಪುರುಷರು ಕೈಯಲ್ಲಿ ಗನ್ ಹಿಡಿದುಕೊಂಡು ಹಬ್ಬದ ಆಚರಣೆಗೆ ಬರ್ತಾರೆ. ಆದ್ರೆ ಇವರ್ಯಾರು ಹೊಡೆದಾಡಿಕೊಳ್ಳೊದಕ್ಕೆ ಗನ್ ಹಿಡಿದಿಲ್ಲ, ಬದಲಾಗಿ ರಕ್ಷಣೆಗೆ ಬಳಸೋ ಶಸ್ತ್ರಾಸ್ತ್ರಗಳನ್ನ ಇಡ್ಕೊಂಡು ತಮ್ಮ ಶೌರ್ಯವನ್ನ ಪ್ರದರ್ಶಿಸ್ತಾರೆ. ಯಾಕಂದ್ರೆ ಕೊಡಗಿನ ಪ್ರಸಿದ್ಧ ಆಚರಣೆಗಳಲ್ಲೊಂದಾದ ಕೈಲ್ ಪೋಳ್ದ್ ಅಥವಾ ಕೈಲ್ ಮುಹೂರ್ತ್ ಹಬ್ಬದ ವಿಶೇಷತೆ ಇದು.
ಇನ್ನು ಕೈಲ್ ಮೂಹರ್ತ ಹಬ್ಬದ ಅಂಗವಾಗಿ ಕೊಡಗಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸುತ್ತಾರೆ. ಅಲ್ಲದೆ ಕೊಡಗಿನ ಸಾಂಪ್ರದಾಯಿಕ ನೃತ್ಯ ಮಾಡುತ್ತ ಕೈಯಲ್ಲಿ ಬಂದೂಕು ಕತ್ತಿ ಗುರಾಣಿಗಳನ್ನು ಹಿಡಿದು ನೃತ್ಯ ಮಾಡುವ ಮೂಲಕ ಕೈಲ್ ಮುಹೂರ್ತ ಹಬ್ಬದಲ್ಲಿ ಖುಷಿ ಪಡುತ್ತಾರೆ.
PublicNext
03/09/2025 02:40 pm