ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ವಿರಾಜಪೇಟೆಯಲ್ಲಿ ಅದ್ದೂರಿಯಾಗಿ ನಡೆದ ಐತಿಹಾಸಿಕ ಗಣೇಶೋತ್ಸವ

ವಿರಾಜಪೇಟೆ: ಐತಿಹಾಸಿಕ ವಿರಾಜಪೇಟೆ ಗಣೇಶೋತ್ಸವಕ್ಕೆ ಮಳೆ ಅಡ್ಡಿಯಾಗಿದ್ದು ಮಳೆಯ ನಡುವೆಯು ಡಿಜೆ ಸೌಂಡ್‌ ವಿರಾಜಪೇಟೆಯ ಜನತೆ ಕುಣಿದು ಕುಪ್ಪಳಿಸಿದ್ರು.

ಪಟ್ಟಣದ ಗಡಿಯಾರ ಕಂಬದ ಬಳಿಯ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಕುರಿಸಿ ಸಾಂಪ್ರದಾಯಿಕವಾಗಿ ಗಣೆಸೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿರಾಜಪೇಟೆಯ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿದ್ದು ನೂರರು ಮಂದಿ ಆಗಮಿಸಿ ಗಣೇಶೋತ್ಸವದ ಮೆರವಣಿಗೆ ಕಣ್ತುಂಬಿಕೊಂಡರು. ತುಂತುರು ಮಳೆಯ ನಡುವೆಯೂ ವಿರಾಜಪೇಟೆಯ ಜನತೆ ಯುವಕ ಯುವತಿಯರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದ್ರು.

ನೂರಾರು ಸಂಖ್ಯೆಯಲ್ಲಿ ಜನ ಆಗಮಿಸೋದ್ರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಮುಂಜಾಗ್ರತಾ ಕ್ರಮ ವಹಿಸಿದ್ದು ಭದ್ರತೆ ಪರಿಶೀಲನೆಗಾಗಿ ಎಡಿಜಿಪಿ ಬಿ.ಕೆ. ಸಿಂಗ್ ಹಾಗೂ ಐಜಿಪಿ ಬೋರಲಿಂಗಯ್ಯ ವೀರಾಜಪೇಟೆಗೆ ಆಗಮಿಸಿ ಪರಿಶೀಲನೆ ನಡೆಸಿದ್ರು. ವಿರಾಜಪೇಟೆಯ ಗೌರಿ ದೇವಾಲಯದಿಂದ ಆರಂಭವಾದ ಮೆರವಣಿಗೆ 22 ಗಣೇಶ ಮೂರ್ತಿಗಳನ್ನ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಐತಿಹಾಸಿಕ ವಿರಾಜಪೇಟೆ ಗಣೇಸೋತ್ಸವಕ್ಕೆ ತೆರೆಬಿದ್ದಿತ್ತು.

Edited By :
PublicNext

PublicNext

07/09/2025 11:48 am

Cinque Terre

22.29 K

Cinque Terre

0

ಸಂಬಂಧಿತ ಸುದ್ದಿ