", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1756216842-kdg.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Purashottama Surapur" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸೋಮವಾರಪೇಟೆ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಹೊನ್ನಮ್ಮದೇವಿ ಉತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಎಂದೂ ಬ...Read more" } ", "keywords": "kodagu, historic honnamma lake, bagina offering, kodagu traditions, kodagu news, karnataka rituals, cultural heritage kodagu, religious offering, festival celebration kodagu, latest kannada news", "url": "https://dashboard.publicnext.com/node" }
ಸೋಮವಾರಪೇಟೆ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಹೊನ್ನಮ್ಮದೇವಿ ಉತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ನವದಂಪತಿಗಳು ಬಾಗಿನ ಅರ್ಪಿಸಿದರು.
ಗ್ರಾಮೋದ್ಧಾರಕ್ಕಾಗಿ ಪ್ರಾಣತ್ಯಾಗಮಾಡಿದ ಹೊನ್ನಮ್ಮನಿಗೆ ಸ್ವರ್ಣಗೌರಿ ಹಬ್ಬದಂದು ಬಾಗಿನ ಅರ್ಪಿಸಿದರೆ ದೀರ್ಘಸುಮಂಗಲಿಯಾಗೋ ಭಾಗ್ಯ ಲಭಿಸೋ ನಂಬಿಕೆಯಲ್ಲಿ ರಾಜ್ಯದ ನಾನಾಭಾಗಗಳಿಂದ ಬಂದಿದ್ದ ನವಜೋಡಿ ದೇವಿಯ ಕೃಪೆಗೆ ಪಾತ್ರರಾದರು.
ಕೊಡಗು ಜಿಲ್ಲೆ ಸೋಮಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮದೇವಿ ಉತ್ಸವದ ವಿಶೇಷ, ಪ್ರತೀವರ್ಷ ಸ್ವರ್ಣಗೌರಿ ಹಬ್ಬದಂದು ನಡೆಯೋ ಈ ಉತ್ಸವದಲ್ಲಿ ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸೋ ನವಜೋಡಿಗಳು ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುತ್ತಾರೆ. ಮುತ್ತೈದೆ ಭಾಗ್ಯ ಕರುಣಿಸೋ ಸ್ವರ್ಣಗೌರಿ ಹಬ್ಬದ ದಿನದಂದು ಗ್ರಾಮೋದ್ಧಾರಕ್ಕಾಗಿ ಕೆರೆಗೆ ಹಾರಿ ಪ್ರಾಣತ್ಯಾಗ ಮಾಡಿದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿದರೆ ಮುತ್ತೈದೆತನ ಪ್ರಾಪ್ತವಾಗುತ್ತೆಂಬ ನಂಬಿಕೆ ಹಿನ್ನೆಲೆ ಭಕ್ತರು ಬಾಗಿನ ಅರ್ಪಿಸಿ ಧನ್ಯರಾಗುತ್ತಾರೆ. ಇಂದು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಆಗಮಿಸಿದ್ದು ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿದರು.
ಸುಮಾರು 16 ಎಕರೆ ವಿಸ್ತೀರ್ಣದಲ್ಲಿರೋ ತಾಲ್ಲೂಕಿನ ದೊಡ್ಡಕೆರೆ ಹೊನ್ನಮ್ಮನ ಕೆರೆಯಾಗಿದ್ದು, ಹೊನ್ನಮ್ಮನ ಆಶೀರ್ವಾದದಿಂದ ಶತಮಾನಗಳಿಂದಲೂ ಕೆರೆ ಒಮ್ಮೆಯೂ ಬತ್ತಿಲ್ಲವೆಂಬುದು ಭಕ್ತರ ನಂಬಿಕೆ, ನೂರಾರು ವರ್ಷಗಳ ಹಿಂದೆ ಗ್ರಾಮಕ್ಕೆ ಒದಗಿಬಂದ ಕ್ಷಾಮ ನೀಗಿಸಲು ನಿರ್ಮಾಣವಾದ ಕೆರೆಯಲ್ಲಿ ನೀರು ಬಾರದಿದ್ದರಿಂದ ಗ್ರಾಮದ ಸೊಸೆ ಹೊನ್ನಮ್ಮ ತನ್ನನ್ನೇ ಕೆರೆಗೆ ಅರ್ಪಿಸಿಕೊಂಡರು. ಆಗ ಕೆರೆತುಂಬಿಹರಿಯಿತು ಎಂಬ ಪುರಾಣಕಥೆ ಚಾಲ್ತಿಯಲ್ಲಿದೆ. ಹೀಗೆ ಮುತ್ತೈದೆಯಾಗಿ ಗ್ರಾಮೋದ್ಧಾರಕ್ಕೆ ಮಡಿದ ಹೊನ್ನಮ್ಮನಿಗೆ ವರ್ಷಕ್ಕೊಮ್ಮೆ ಬಾಗಿನ ಅರ್ಪಿಸಿದರೆ ಮುತ್ತೈದೆ ವರ ನೀಡುತ್ತಾಳೆಂಬುದು ಭಕ್ತರ ನಂಬಿಕೆ. ಹಾಗಾಗಿ ಸುತ್ತಮುತ್ತಲ ಗ್ರಾಮದ ಯುವತಿಯರು ಎಲ್ಲಿಗೇ ವಿವಾಹವಾಗಿದ್ದರೂ ಈ ದಿನದಂದು ಆಗಮಿಸಿ ಬಾಗಿನ ಅರ್ಪಿಸುತ್ತಾರೆ.
PublicNext
26/08/2025 07:37 pm