ಗುಂಡ್ಲುಪೇಟೆ: ಯಾವುದೇ ಮುನ್ಸೂಚನೆ ಕೊಡದೇ ಒಣ ಮರಗಳ ನೆಪವೊಡ್ಡಿ 10 ಮರಗಳನ್ನು ಕತ್ತರಿಸಿ ಪರಿಸರ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲೀಕ್ ಕಿಡಿಕಾರಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಬಿಇಒ ಕಚೇರಿ ಹಿಂಭಾಗದಲ್ಲಿದ್ದ 10 ಮರಗಳನ್ನು ಯಾವುದೇ ಸಾರ್ವಜನಿಕ ಪ್ರಕಟಣೆ ಕೊಡದೇ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ 3 ಮರಗಳನ್ನು ಕತ್ತರಿಸಿದ್ದರು. ಈಗ ಮತ್ತೇ 10 ಮರಗಳನ್ನು ಕತ್ತರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
PublicNext
04/09/2025 09:22 am