", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/286525-1757336351-WhatsApp-Image-2025-09-08-at-6.29.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಂಡ್ಲುಪೇಟೆ: ಯಾವೊಬ್ಬ ವ್ಯಕ್ತಿಯು ಸಹ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಹಾಗೆಯೇ ಉಪನ್ಯಾಸ ನೀಡುವ ಗುರುಗಳ ಪಾತ್...Read more" } ", "keywords": "Gundlupet MLA, Ganesh Prasad, teachers' role, shaping future, education, development, youth empowerment, legislative initiatives, rural development, healthcare infrastructure, road safety, community service ", "url": "https://dashboard.publicnext.com/node" } ಗುಂಡ್ಲುಪೇಟೆ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ದೊಡ್ಡದು- ಶಾಸಕ ಗಣೇಶ ಪ್ರಸಾದ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ದೊಡ್ಡದು- ಶಾಸಕ ಗಣೇಶ ಪ್ರಸಾದ್

ಗುಂಡ್ಲುಪೇಟೆ: ಯಾವೊಬ್ಬ ವ್ಯಕ್ತಿಯು ಸಹ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಹಾಗೆಯೇ ಉಪನ್ಯಾಸ ನೀಡುವ ಗುರುಗಳ ಪಾತ್ರವೂ ಸಹ ಅಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಾಮರಾಜನಗರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇನೆ. ಭವನದ ದುರಸ್ತಿಗೆ ಅನುದಾನ ನೀಡುವ ಮೂಲಕ ಸೌಕರ್ಯ ಒದಗಿಸಲು ಬದ್ಧ ಎಂದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 2022-23ನೇ ಸಾಲಿನಲ್ಲಿ ಐದು ಕೋಟಿ ಹಣ ಅನುದಾನ ತಂದಿದ್ದು, ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಡಿಗ್ರಿ, ಪಿಯು ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅನುದಾನ ತರಲಾಗಿದೆ, ಎಲ್ಲವನ್ನು ಸುಧಾರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ನಮ್ಮ ಕ್ಷೇತ್ರದಲ್ಲಿ ಹೆಚ್ಚು ವಸತಿ ಶಾಲೆಗಳು , ಅಂಬೇಡ್ಕರ್ ಶಾಲೆಗಳಿವೆ. ಬೊಮ್ಮನಹಳ್ಳಿ ಗ್ರಾಮದಲ್ಲಿ 18 ಕೋಟಿ ಹಣ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Edited By : Shivu K
PublicNext

PublicNext

08/09/2025 06:29 pm

Cinque Terre

10.13 K

Cinque Terre

0