ಚಾಮರಾಜನಗರ : ಶ್ರೀ ವಿದ್ಯಾಗಣಪತಿ ಭಕ್ತಮಂಡಳಿ ವತಿಯಿಂದ ಗುರುವಾರ ಚಾಮರಾನಗರದ ಗರುನಂಜಯ್ಯ ಛತ್ರದ ವೇದಿಕೆಯಲ್ಲಿ ಬ್ರಹ್ಮೋಸ್ ಕ್ಷಿಪಣಯ ಮೇಲೆ ಕುಳಿತ ಬೃಹತ್ ಗಾತ್ರದ ಗಣೇಶನ ಮೂರ್ತಿಯನ್ನು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಲಾಯಿತು.
ಪ್ರತಿ ವರ್ಷ ಗೌರಿ-ಗಣೇಶ ಹಬ್ಬದ ದಿನದಂದು ಸಣ್ಣಗಾತ್ರದ ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡಿ ಬಳಿಕ ಒಂದು ವಾರದ ನಂತರ ವಿಶಿಷ್ಟ ಆಕೃತಿಯ ಬೃಹತ್ ಗಾತ್ರದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಒಂದು ತಿಂಗಳ ಕಾಲ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಸರ್ಜನೆ ಮಾಡುವುದು ಹಲವು ದಶಕಗಳಿಂದಲೂ ನಡೆದು ಕೊಂಡು ಬಂದಿದೆ.
ಅದರಂತೆ ಈ ಬಾರಿಯೂ ಕೂಡ ಗೌರಿ ಗಣೇಶ ಹಬ್ಬ ಮುಗಿದು ಒಂದು ವಾರದ ಬಳಿಕ ಬ್ರಹ್ಮೋಸ್ ಕ್ಷಿಪಣಿಯ ಮೇಲೆ ಕುಳಿತ ಬೃಹತ್ ಗಾತ್ರದ ಗಣೇಶನ ಮೂರ್ತಿಯನ್ನು ಗುರುವಾರ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು.
Kshetra Samachara
04/09/2025 12:11 pm