ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗಣೇಶೋತ್ಸವ ವಿಸರ್ಜನೆ ವೇಳೆ ಅವಘಡ - ವ್ಯಕ್ತಿ ಸಾವು

ಬೆಳಗಾವಿ ನಗರದಲ್ಲಿ ಗಣೇಶೋತ್ಸವ ವಿಸರ್ಜನೆ ವೇಳೆ ನಡೆದ ದುರಂತದಲ್ಲಿ ವ್ಯಕ್ತಿಯೋರ್ವ ದುರ್ಮರಣ ಹೊಂದಿದ್ದಾನೆ. ನಗರದ ಜಕ್ಕೇರಿ ಹೊಂಡದಲ್ಲಿ ಮನೆ ಗಣೇಶ ವಿಸರ್ಜನೆ ವೇಳೆ ಬಿದ್ದು, ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ (33) ಸಾವನ್ನಪ್ಪಿದ್ದಾರೆ.

ಸ್ಥಳೀಯರು ತಕ್ಷಣ ರಕ್ಷಣೆ ಕಾರ್ಯಾಚರಣೆ ನಡೆಸಿ, ರಾಹುಲ್ ಅವರನ್ನು ಬೀಮ್ಸ್ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ, ಆಗಲೇ ಅವರು ಸಾವನ್ನಪ್ಪಿದ್ದರು.

Edited By : Abhishek Kamoji
Kshetra Samachara

Kshetra Samachara

06/09/2025 10:17 pm

Cinque Terre

5.86 K

Cinque Terre

0

ಸಂಬಂಧಿತ ಸುದ್ದಿ