", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1757382095-WhatsApp-Image-2025-09-08-at-10.41.05-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಕ್ನೋ: 11 ವರ್ಷದ ಬಾಲಕಿ ಮೇಲೆ 2 ಮಕ್ಕಳ ತಂದೆ ನಿರಂತರ ಅತ್ಯಾಚಾರ ಎಸಗಿದ್ದು, ಹೆರಿಗೆಯಾದ ಕೇವಲ ಅರ್ಧ ಗಂಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿರುವ...Read more" } ", "keywords": "Minor girl rape case, repeated sexual assault, father of two rapist, justice for minor girl, public outrage, child abuse case India,", "url": "https://dashboard.publicnext.com/node" }
ಲಕ್ನೋ: 11 ವರ್ಷದ ಬಾಲಕಿ ಮೇಲೆ 2 ಮಕ್ಕಳ ತಂದೆ ನಿರಂತರ ಅತ್ಯಾಚಾರ ಎಸಗಿದ್ದು, ಹೆರಿಗೆಯಾದ ಕೇವಲ ಅರ್ಧ ಗಂಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಆರೋಪಿ ರಶೀದ್ (31) ಅಪ್ರಾಪ್ತೆಯನ್ನು ಬೆದರಿಸಿ ದೀರ್ಘಕಾಲ ಅತ್ಯಾಚಾರ ಎಸಗಿದ್ದಾನೆ. ಸುಮಾರು 6-7 ತಿಂಗಳ ಹಿಂದೆ ಹಣ್ಣು ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಈ ವಿಷಯ ಬಯಲಾಗಿದ್ರೆ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಲೈಂಗಿಕ ಶೋಷಣೆಗೆ ಒತ್ತಾಯಿಸಲು ವೀಡಿಯೋ ಮಾಡಿ ಅವಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಪೀಡಿತೆಯ ಅಣ್ಣ ಪೊಲೀಸರಿಗೆ ತಿಳಿಸಿದ್ದಾರೆ.
ಗುರುವಾರ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಕರೆದ್ಯೊಯಲಾಯ್ತು. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಆಕೆ 7 ತಿಂಗಳ ಗರ್ಭಿಣಿ ಎಂದು ಬಹಿರಂಗವಾಯ್ತು. ತಕ್ಷಣ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕಿ ಅದೇ ದಿನ ಮಗುವಿಗೆ ಜನ್ಮ ನೀಡಿದ್ದಾಳೆ. ಅಕಾಲಿಕ ಹೆರಿಗೆಯ ಕಾರಣ ನವಜಾತ ಶಿಶು ಅರ್ಧ ಗಂಟೆಯಲ್ಲೇ ಮೃತಪಟ್ಟಿದೆ.
ಈ ಸಂಬಂಧ ರಶೀದ್ ವಿರುದ್ಧ ದೂರು ದಾಖಲಿಸಲಾಗಿದ್ದು, ಶನಿವಾರ ಅವನನ್ನು ಬಂಧಿಸಲಾಗಿದೆ. ನವಾಬ್‌ಗಂಜ್ ಠಾಣಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ, ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ದೃಢಪಡಿಸಿದ್ದಾರೆ.
PublicNext
09/09/2025 07:11 am