ಕೂಡ್ಲಿಗಿ : ಅಪರಿಚಿತ ವಾಹನವೊಂದು ಎತ್ತಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮ ಮೂಖ ಪ್ರಾಣಿ ನೆಲಕ್ಕೆ ಬಿದ್ದು ವಿಲವಿಲ ಒದ್ದಾಡಿದೆ. ಇದಕ್ಕೆ ರೈತನ ಹಿಡಿಶಾಪ ಹಾಕಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರೂಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೆಡೆದಿದೆ.
ರಾ.ಹೆದ್ದಾರಿ ಅಕ್ಕ - ಪಕ್ಕದ ಗ್ರಾಮಗಳ ರೈತರು ಸಾಕುವ ಎತ್ತು, ಎಮ್ಮೆ, ಕುರಿ ಸೇರಿ ಇತರೇ ಪ್ರಾಣಿಗಳಿಗೆ ರಸ್ತೆ ದಾಟುವ ವೇಳೆ ಏಕಾಏಕಿ ಬೃಹತ್ ವಾಹನಗಳು ಗುದ್ದಿಕೊಂಡು ಹೋಗ್ತಿವೆ. ಇದ್ರಿಂದ ರೈತರಿಗೆ ದೊಡ್ಡ ಮಟ್ಟದ ಲಾಸ್ ಆಗ್ತಿದೆ. ಬೃಹತ್ ವಾಹನ ಚಾಲಕರಿಗೆ, ರೈತರಿಗೆ ವಿಶೇಷ ಸಭೆ ಕರೆದು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
09/09/2025 10:49 am