", "articleSection": "Agriculture", "image": { "@type": "ImageObject", "url": "https://prod.cdn.publicnext.com/s3fs-public/286525-1757342110-WhatsApp-Image-2025-09-08-at-8.05.01-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಕಿತ್ತುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇಟ್ ಕೂಡಿಸಲು ನಿರ್ಲಕ್ಷ್ಯ ತೋರುತ್ತಿರೋ ಮೂರು ರಾಜ್ಯ...Read more" } ", "keywords": "Tungabhadra dam crisis, farmer protests, crest gate damage, water scarcity, irrigation issues, Karnataka government, Andhra Pradesh government, Telangana government, central government negligence, dam safety concerns, water management", "url": "https://dashboard.publicnext.com/node" } ಕ್ರಸ್ಟ್‌ ಗೇಟ್ ದುರಸ್ಥಿ ನಿರ್ಲಕ್ಷ್ಯ : ಕೇಂದ್ರ, ಮೂರು ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದ ರೈತರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಸ್ಟ್‌ ಗೇಟ್ ದುರಸ್ಥಿ ನಿರ್ಲಕ್ಷ್ಯ : ಕೇಂದ್ರ, ಮೂರು ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದ ರೈತರು

ಹೊಸಪೇಟೆ : ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಕಿತ್ತುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇಟ್ ಕೂಡಿಸಲು ನಿರ್ಲಕ್ಷ್ಯ ತೋರುತ್ತಿರೋ ಮೂರು ರಾಜ್ಯ, ಕೇಂದ್ರ ಹಾಗೂ ಟಿಬಿ ಬೋರ್ಡ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ರು.

ಹೊಸಪೇಟೆ ತಾಲೂಕಿನ ಮುಖ್ಯ ಗೇಟ್ ಬಳಿ ತುಂಗಭದ್ರಾ ಜಲಾಶಯ ಜ್ವಲಂತ ಸಮಸ್ಯೆ ಹೆಸರಲ್ಲಿ ನಡೆದ ಪ್ರತಿಭಟನೆ ವೇಳೆ ಕ್ರಸ್ಟ್‌ ಗೇಟ್ ಕೂಡಿಸುವಲ್ಲಿ ವಿಫಲವಾದ ಸರ್ಕಾರಗಳು ಯಾಕೇ ಬೇಕು. ಜಲಾಶಯಕ್ಕೆ ಕ್ರಸ್ಟ್‌ ಗೇಟ್ ಕೂಡಿಸಲೇಬೇಕು ಅಂತ ಆಕ್ರೋಶ ಹೊರಹಾಕಿದ್ರು. ಗೇಟ್ ಯಾವಾಗ ಕೂಡಿಸ್ತಿರಿ, ಎರಡನೇ ಬೆಳೆ ನೀರು ಕೊಡಬೇಕು, ಕಳ್ಳ ನೀರಾವರಿಗೆ ಕಡಿವಾಣ ಹಾಕಬೇಕು ಎಂದು ಹತ್ತಾರು ಬೇಡಿಕೆಯಿಟ್ಟು ಟಿಬಿ ಬೋರ್ಡ್ ಸೆಕ್ರೆಟರಿ ಓಆರ್'ಕೆ ರೆಡ್ಡಿ ಮನವಿ ಸಲ್ಲಿಸಿದರು.

ಮನವಿ ಸ್ವೀಕಾರಕ್ಕೆ ಟಿಬಿ ಬೋರ್ಡ್ ಸೆಕ್ರೆಟರಿ ಬರ್ತಿದ್ದಂತೆ ರೊಚ್ಚಿಗೆದ್ದ ರಾಯಚೂರು ಜಿಲ್ಲೆಯ ಭಾಗದ ರೈತರು ಕಾಲುವೆಗಳಿಗೆ ನೀರು ಯಾಕ್ರಿ ಬಿಡೋದಿಲ್ಲ. ಎರಡನೇ ಬೆಳೆಗೂ ನೀರು ಬೇಕು ಅಂತ ಆಕ್ರೋಶ ಹೊರಹಾಕಿದ್ರು. ರೈತ ಮುಖಂಡ ಬೆಳಗುರ್ಕಿ ಹನುಮಗೌಡ ಮಾತಿಗೆ ಟಿಬಿ ಬೋರ್ಡ್ ಅಧಿಕಾರಿಗಳೇ ಕಕ್ಕಾಬಿಕ್ಕಿ ಆದ್ರು‌.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವೆಂಕಟಪ್ಪ ನಾಯಕ, ಬೆಳಗುರ್ಕಿ ಹನುಮಗೌಡ, ಚಾಮರಸ ಪಾಟೀಲ್, ವೀರಸಂಗಯ್ಯ, ಗೋಣಿಬಸಪ್ಪ, ಸೋಮಶೇಖರ್ ಗಂಟಿ ಸೇರಿ ನೂರಾರು ರೈತರು ಭಾಗಿ ಆಗಿದ್ರು.

Edited By : Shivu K
PublicNext

PublicNext

08/09/2025 08:05 pm

Cinque Terre

19.69 K

Cinque Terre

0

ಸಂಬಂಧಿತ ಸುದ್ದಿ