", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/52563-1757401955-WhatsApp-Image-2025-09-09-at-9.19.51-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KarthikUdupi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ, : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುದುಗಾರ ಬನ್ನಂಜೆ ಸಂಜೀವ ಸುವರ್ಣರ ಸೃಜನಾತ್ಮಕ ಸಾಧನೆಗೆ ಸಮರ್ಪಿತ “ಸಂಜೀವ ಯಕ್ಷ ಜೀವನ-ಭಾವ” ...Read more" } ", "keywords": ""Sanjeeva Yaksha Jeevana-Bhava, Udupi event, September 12 event, Yaksha Gan, cultural event, Sanjeva Yaksha, Udupi news" ", "url": "https://dashboard.publicnext.com/node" }
ಉಡುಪಿ, : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುದುಗಾರ ಬನ್ನಂಜೆ ಸಂಜೀವ ಸುವರ್ಣರ ಸೃಜನಾತ್ಮಕ ಸಾಧನೆಗೆ ಸಮರ್ಪಿತ “ಸಂಜೀವ ಯಕ್ಷ ಜೀವನ-ಭಾವ” ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ಉಡುಪಿ ಕುಂಜಿಬೆಟ್ಟಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯಲಿದೆ. ತಿಂಗಳಿ ಪ್ರತಿಷ್ಠಾನ ಹಾಗೂ ಸಂಜೀವ ಶಿಷ್ಟವಂದದ ಸಹಯೋಗದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡಾ. ಗಿರಿಜಾ ಅಧ್ಯಕ್ಷತೆ ವಹಿಸುವರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
3:30ಕ್ಕೆ ಬನ್ನಂಜೆ ಸಂಜೀವ ಸುವರ್ಣರಿಂದ ಪಾರಂಪರಿಕ ಯಕ್ಷಗಾನ ನೃತ್ಯಪ್ರದರ್ಶನ ನಡೆಯಲಿದ್ದು, ನಂತರ “ನಮ್ಮ ಸಂಜೀವ” ವಿಚಾರಗೋಷ್ಠಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಮೂಳಿತಜ್ಞ ಡಾ. ಭಾಸ್ಕರಾನಂದ ಕುಮಾರ್, ಮುರಲಿ ಕಡೆಕಾರ್ ಹಾಗೂ ಭಾಗವತ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರು ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಮಾರೋಪ ಹಾಗೂ ಗುರುವಂದನೆ ನಡೆಯಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಬಿಎಂಪಿ ಅಪರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮತ್ತು ಹೃದಯತಜ್ಞ ಡಾ. ಎಚ್. ನರೇಶ್‌ಚಂದ್ರ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಬನ್ನಂಜೆ ಸಂಜೀವ ಸುವರ್ಣರ ವಿದ್ಯಾರ್ಥಿಗಳಿಂದ “ಕಾಶಿ ಕುವರಿ” (ಭೀಷ್ಮ ವಿಜಯ) ಯಕ್ಷಗಾನ ಪ್ರದರ್ಶನ ನಡೆಯಲಿದೆ.
Kshetra Samachara
09/09/2025 12:43 pm