", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1757348800-m.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಅಂಗನವಾಡಿ ಕಾರ್ಯಕರ್ತೆಯರು ಬಿಎಲ್ ಒ ತರಬೇತಿಗೆ ಗೈರು ಹಾಜರಾದುದಕ್ಕೆ ಕಾರಣ ನೀಡಿ ಮತದಾರ ನೋಂದಣಿ ಅಧಿಕಾರಿಗಳು ನೀಡಿದ ನೋಟಿಸಿಗೆ ...Read more" } ", "keywords": "Brahmawar anganwadi workers, BLO work exemption, government plea, anganwadi staff demands, Karnataka government services, anganwadi workers' issues, voter ID card work load.", "url": "https://dashboard.publicnext.com/node" }
ಬ್ರಹ್ಮಾವರ: ಅಂಗನವಾಡಿ ಕಾರ್ಯಕರ್ತೆಯರು ಬಿಎಲ್ ಒ ತರಬೇತಿಗೆ ಗೈರು ಹಾಜರಾದುದಕ್ಕೆ ಕಾರಣ ನೀಡಿ ಮತದಾರ ನೋಂದಣಿ ಅಧಿಕಾರಿಗಳು ನೀಡಿದ ನೋಟಿಸಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಲೆವೆಲ್ ಆಫೀಸರ್ ಕೆಲಸವನ್ನು ಕೈಬಿಡಬೇಕು ಎಂದು ಸರಕಾರವನ್ನು ಒತ್ತಾಯಿಸಿ ಬ್ರಹ್ಮಾವರದ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಬೆಳಿಗ್ಗೆ ಬ್ರಹ್ಮಾವರ ತಹಶೀಲ್ದಾರ್ ಗೆ ಮನವಿ ನೀಡಿದರು.
ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ವಿತರಣೆ,ಪೋಷಣ್ ಅಭಿಯಾನ,ಅಪೌಷ್ಠಿಕ ಮಕ್ಕಳ ಗುರುತಿಸುವಿಕೆ, ಮಾತೃವಂದನ,ಭಾಗ್ಯಲಕ್ಷ್ಮೀ 0-6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಸೇವೆ ಮುಂತಾದ ಅನೇಕ ಕೆಲಸಗಳನ್ನು ಇ- ಆಪ್ ಮೂಲಕ ಮಾಡುತ್ತಿದ್ದೇವೆ.
ಸಿ ದರ್ಜೆ ನೌಕರರನ್ನು ಬಿಎಲ್ ಒ ಕೆಲಸಗಳಿಗೆ ನೇಮಕ ಮಾಡಬೇಕು ಎಂದು ಚುನಾವಣಾ ಆಯೋಗದ ಆದೇಶ ಇದ್ದರೂ ವರ್ಷಕ್ಕೆ 7,000 ಗೌರವಧನದಿಂದ ಒತ್ತಡದಿಂದ ಕೆಲಸ ಮಾಡಿಕೊಳ್ಳುತ್ತಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ ಒ ಕೆಲಸದಿಂದ ಕೈ ಬಿಡಬೇಕು ಎಂದು ಒತ್ತಾಯಿಸಲಾಗಿದೆ. ಉಪ ತಹಶೀಲ್ದಾರ್ ಮನವಿ ಸ್ವೀಕರಿಸಿದರು.
ಬ್ರಹ್ಮಾವರ ವೃತ್ತದ 28 ಮಂದಿ ಬಿಎಲ್ ಒಗಳು ಭಾಗವಹಿಸಿದ್ದರು. ಬ್ರಹ್ಮಾವರದ 78 ಮಂದಿ ಬಿಎಲ್ ಒ ಭಾಗವಹಿಸಬೇಕಾದ ತರಬೇತಿಗೆ 45 ಮಂದಿ ಗೈರುಹಾಜರಾಗಿದ್ದರು.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್ ಒ ಕೆಲಸ ಮಾಡಲು ಅಸಮಾಧಾನ ವ್ಯಕ್ತಪಡಿಸಿದ್ದರು.
PublicNext
08/09/2025 09:56 pm