ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಮಹಾನಿರ್ದೇಶಕರಾಗಿ ನೇಮಕಗೊಂಡ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ಅಲೋಕ್‌ಕುಮಾರ್ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಯಾವುದೇ ವಾಹನ ಬಂದರೂ ಚೆಕ್‌ಪೋಸ್ಟ್‌ನಲ್ಲಿ ತಡೆದು ನಿಲ್ಲಿಸಿ ಸರಿಯಾಗಿ ಪರಿಶೀಲಿಸಿದ ನಂತರವೇ ಒಳಗೆ ಬಿಡಬೇಕು. ನಿಷೇಧಿತ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ವಾಹನ ತಡೆದು ಕೇಸ್ ದಾಖಲಿಸಬೇಕು. ಜೈಲಿನ ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಾರ್ಕಿಂಗ್ ಸ್ಥಳವನ್ನು ಶಿಸ್ತಿನಿಂದ ನಿರ್ವಹಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ಜೈಲಿನ ವಿವಿಧ ಬ್ಯಾರಕ್‌ಗಳಿಗೆ ತೆರಳಿದ ಅವರು, ಅಲ್ಲಿನ ಸೌಲಭ್ಯ ಹಾಗೂ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಕೈದಿಗಳು ಅನಾರೋಗ್ಯಕ್ಕೆ ಒಳಗಾದರೆ ಸಕಾಲಕ್ಕೆ ಚಿಕಿತ್ಸೆ ಕೊಡಬೇಕು. ಅದು ಬಿಟ್ಟು ಬೀಡಿ, ಸಿಗರೇಟ್,ಗಾಂಜಾ ಸೇರಿ ಇತರ ದುಶ್ಚಟ ಮಾಡಲು ಸಹಕರಿಸಿದ್ದು ಕಂಡುಬಂದಲ್ಲಿ ಸಿಬ್ಬಂದಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೈಲಿನಲ್ಲಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಕೊಲೆ ಆರೋಪದಲ್ಲಿ ಇದೇ ಜೈಲಿನಲ್ಲಿ ಇರುವ ನಟ ದರ್ಶನ್ ಅವರ ಬ್ಯಾರಕ್‌ಗೂ ಭೇಟಿ ನೀಡಿದ ಅಲೋಕ್‌ಕುಮಾರ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಯಾವುದೇ ಕುಂದುಕೊರತೆ ಇಲ್ಲ ಎಂದು ಅವರು ಹೇಳಿದ್ದಾರೆ. ಅವರ ಬ್ಯಾರಕ್‌ನಲ್ಲಿ ಆರು ಮಂದಿ ಇದ್ದಾರೆ ಎಂದು ಹೇಳಿದ್ದಾರೆ.
PublicNext
16/12/2025 07:52 am
LOADING...