ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಉಸ್ತುವಾರಿ ಸಚಿವರು VS ಶಾಸಕರು.!

ಬೆಳಗಾವಿ: ಈ ಸರ್ಕಾರ ಬಂದ ಮೇಲೆ ಶಾಸಕರಿಗೆ ಮರ್ಯಾದೆ ಕೊಡದೇ ಉಸ್ತುವಾರಿ ಸಚಿವರಿಗೆ ಮರ್ಯಾದೆ ಹೆಚ್ಚಾಗಿದೆ! ಇದು ಸ್ಥಳೀಯ ಶಾಸಕರಿಗೆ ಮಾಡುತ್ತಿರುವ ಅವಮಾನವಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿಯಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಆರ್. ಅಶೋಕ್ ಅವರ ನೇತೃತ್ವದಲ್ಲಿ ಸದನದಲ್ಲಿ ಇಂದು ಧ್ವನಿ ಎತ್ತಿದರು.

ಜಿಲ್ಲಾ ಉಸ್ತುವಾರಿ ಸಚಿವರು ಅಂತೇನಿಲ್ಲ. ಅವರೊಬ್ಬ ಸಚಿವರು ಅಷ್ಟೇ. ಆದರೆ, ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರೇ ಆಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರಬೇಕಾಗಿರೋದು "ಪ್ರೊಟೊಕಾಲ್" ಕೂಡ. ಆದರೆ, ಸದ್ಯ ಶಾಸಕರನ್ನು ಮುಖ್ಯ ಅತಿಥಿಗಳನ್ನಾಗಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರೇ ಅಧ್ಯಕ್ಷತೆ ವಹಿಸುತ್ತಿರೋದು "ಪ್ರೊಟೊಕಾಲ್" ನ ಉಲ್ಲಂಘನೆಯಾಗಿದೆ ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಉತ್ತರ ಕೊಟ್ಟ ಕಾನೂನು ಮತ್ತು ಸಂಸದೀಯ ಸಚಿವ ಹೆಚ್. ಕೆ. ಪಾಟೀಲ್ ಅವರು, ಮುಖ್ಯಮಂತ್ರಿಯವರು, ಮುಖ್ಯ ಕಾರ್ಯದರ್ಶಿಗಳೊಂದಿಗೆ ಈ ಬಗ್ಗೆ ಮಾತನಾಡಿ ನಾಳೆ ಉತ್ತರಿಸುವೆ ಎಂದರು.

ಇದೇ ವೇಳೆ, ಶಾಸಕರ ಗೌರವಕ್ಕೆ ಚ್ಯುತಿಯಾಗುವುದನ್ನು ನಾವು ಒಪ್ಪಲಾಗದು ಎಂದೂ ಸ್ಪೀಕರ್ ಹೇಳಿದರು. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.

Edited By :
PublicNext

PublicNext

18/12/2025 07:33 am

Cinque Terre

4.71 K

Cinque Terre

0

ಸಂಬಂಧಿತ ಸುದ್ದಿ