ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಿಳಾ ಸಂಘಟನೆ ಪವರ್‌ನಿಂದ ಜನವರಿ 10-11ಕ್ಕೆ ಪವರ್ ಫುಡ್ ಕಾರ್ನಿವಾಲ್

ಉಡುಪಿ: ಪವರ್ ಸಂಸ್ಥೆಯ ವತಿಯಿಂದ ಹೊಸ ಪರಿಕಲ್ಪನೆಯೊಂದಿಗೆ ಇದೇ ಮೊದಲ ಬಾರಿಗೆ "ಪವರ್ ಫುಡ್ ಕಾರ್ನಿವಲ್ ಕಾರ್ಯಕ್ರಮ"ವನ್ನು ಜನವರಿ 10 ಮತ್ತು 11ರಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕಿ ರೇಣು ಜಯರಾಮ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 60ಕ್ಕಿಂತ ಹೆಚ್ಚು ತಿಂಡಿ ತಿನಸುಗಳ ಸ್ಟಾಲ್‌ಗಳು, 100ಕ್ಕಿಂತ ಹೆಚ್ಚು ವಿಭಿನ್ನ ಆಹಾರ ಪದಾರ್ಥಗಳು ಹಾಗೂ 10ಕ್ಕಿಂತ ಹೆಚ್ಚು ಸಂವಹನಾತ್ಮಕ ಅನುಭವಗಳು ಪವರ್ ಫುಡ್ ಕಾರ್ನಿವಲ್‌ನ ವಿಶೇಷ ಆಕರ್ಷಣೆಯಾಗಿವೆ. ಸ್ಥಳೀಯ ಆಹಾರ ಉದ್ಯಮಿಗಳು, ಮಹಿಳಾ ಆಹಾರ ಉದ್ಯಮಿಗಳು ಹಾಗೂ ಆಹಾರ ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಈ ಫುಡ್ ಕಾರ್ನಿವಾಲ್‌ನ ಮುಖ್ಯ ಉದ್ದೇಶ ಎಂದರು.

ಪವರ್ ಸಂಸ್ಥೆಯ ಅಧ್ಯಕ್ಷೆ ಪ್ರಿಯಾ ಎಸ್. ಕಾಮತ್ ಮಾತನಾಡಿ, ಈ ಫುಡ್ ಕಾರ್ನಿವಾಲ್‌ಗೆ ಆಹಾರ ಉದ್ಯಮಿಗಳು ಹಾಗೂ ಫುಡ್ ಬ್ರಾಂಡ್‌ಗಳನ್ನು ಆಹ್ವಾನಿಸಲಾಗುತ್ತಿದೆ. ಪವರ್ ಫುಡ್ ಕಾರ್ನಿವಲ್‌ನಲ್ಲಿ ಪಾಲ್ಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕಾರ್ಯಕ್ರಮದ ವ್ಯವಸ್ಥೆ ಮತ್ತು ಸ್ಥಳ ಮಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರದರ್ಶಕರ ನೋಂದಣಿಯನ್ನು ಈ ತಿಂಗಳ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ತೃಪ್ತಿ ನಾಯಕ್, ಪ್ರದರ್ಶಕರ ಸಂಯೋಜಕಿ ಶಾಲಿನಿ ಬಂಗೇರಾ, ಮಾರುಕಟ್ಟೆ ಸಂಯೋಜಕಿ ರೇವತಿ ನಾಡಗೀರ್, ಕಾರ್ಯಕ್ರಮ ಪ್ರಾಯೋಜಕತ್ವ ಸಂಯೋಜಕಿ ತಾರಾ ತಿಮ್ಮಯ್ಯ, ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

20/12/2025 08:32 pm

Cinque Terre

396

Cinque Terre

0