ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಸತ್ತಿನ ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ:ಸಂಸತ್ತಿನಲ್ಲಿ ಅಂಗೀಕಾರಗೊಂಡ ಪ್ರಮುಖ ಬಿಲ್​ಗಳು

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನಕ್ಕೆ ತೆರೆಬಿದ್ದಿದೆ. ಅದರಲ್ಲಿ 8 ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಹೌದು ರಾಜ್ಯಸಭೆಯ 269ನೇ ಅಧಿವೇಶನವನ್ನು ಶುಕ್ರವಾರ ಅಧ್ಯಕ್ಷರು ಆಗಿರುವ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅವರು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಕಲಾಪದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಸದನದ ನಾಯಕ ಜೆ.ಪಿ. ನಡ್ಡಾ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎಲ್ಲಾ ಸದಸ್ಯರಿಗೆ ಅವರು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ಹಿಂದಿನ ಎರಡು ಅಧಿವೇಶನಗಳಿಗಿಂತ ಈ ಬಾರಿ ಶೇ.30.1ರಷ್ಟು ಹೆಚ್ಚಳ ಕಂಡಿದೆ ಮತ್ತು ಶೂನ್ಯ ಗಂಟೆಯಲ್ಲಿ ಪ್ರತಿದಿನ 15 ಕ್ಕೂ ಹೆಚ್ಚು ವಿಷಯಗಳ ಚರ್ಚೆ ನಡೆಸಲಾಗಿದ್ದು. ಇದು ಸುಮಾರು ಶೇ. 50 ರಷ್ಟು ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಸದನವು ಸುಮಾರು 92 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು, ಶೇ. 121 ರಷ್ಟು ಪ್ರಭಾವಶಾಲಿ ಉತ್ಪಾದಕತೆಯೊಂದಿಗೆ ಪ್ರಮುಖ ಚರ್ಚೆಗಳು ಸಾಗಿದವು.

ರಾಜ್ಯಸಭೆಯಲ್ಲಿ ಎಂಟು ಮಸೂದೆ ಅಂಗೀಕಾರ

➧ಮಹಾತ್ಮಾ ಗಾಂಧಿ ಹೆಸರನ್ನು ತೆಗೆದುಹಾಕಲಾದ 'ವಿಕ್ಷಿತ್ ಭಾರತ್ G RAM G' ಮಸೂದೆ

➧ವಿಮಾ ಕ್ಷೇತ್ರದಲ್ಲಿ FDI ಹೂಡಿಕೆಯನ್ನು 100% ಕ್ಕೆ ಹೆಚ್ಚಿಸಲು 'ಸಬ್ಕಾ ಬಿಮಾ ಸಬ್ಕಿ ರಕ್ಷಾ' ಮಸೂದೆ

➧ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ವಿಶೇಷ ತೆರಿಗೆ ವಿಧಿಸುವ 'ಸೆಸ್' ಮಸೂದೆ

➧ಅಣುಶಕ್ತಿ ವಲಯದಲ್ಲಿ ಖಾಸಗಿ ಕಂಪನಿಗಳಿಗೆ ಅನುಮತಿ ನೀಡುವ 'ಶಾಂತಿ' ಮಸೂದೆಯನ್ನು ಅಂಗೀಕರಿಸಲಾಯಿತು.

2024ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಸೇರಿದಂತೆ ಎಂಟು ಮಸೂದೆಗಳನ್ನು ಅಂಗೀಕರಿಸಲಾಗಿದೆ. 212 ಸದಸ್ಯರು ಕಲಾಪದಲ್ಲಿ ಭಾಗವಹಿಸಿದ್ದರು. 59 ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲಾಯಿತು.

Edited By : Nirmala Aralikatti
PublicNext

PublicNext

20/12/2025 02:42 pm

Cinque Terre

54.52 K

Cinque Terre

0