ಬಜಪೆ: ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಎಕ್ಕಾರು ಶ್ರೀಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭ ರಾತ್ರಿ ಶ್ರೀ ಪಿಲಿ (ಹುಲಿ) ಚಾಮುಂಡಿ ದೈವದ ನೇಮವು ವಿಜೃಂಭಣೆಯಿಂದ ಜರುಗಿತು.
ಎಕ್ಕಾರು ಶ್ರೀಕೊಡಮಂತ್ತಾಯ ದೈವಸ್ಥಾನ(ದೇರಿಂಜಗಿರಿ)ವು ಎತ್ತರದಲ್ಲಿರುವ ಗುಡ್ಡದ ಮೇಲೆ ಇರುವ ದೈವಸ್ಥಾನವಾಗಿದ್ದು, ಗುಡ್ಡೆದಾಯನವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ದೈವಸ್ಥಾನಕ್ಕೆ ಸಂಬಂಧಪಟ್ಟ ದೈವಗಳ ಭಂಡಾರ ಮನೆಯಾದ ಎಕ್ಕಾರು ಕಾವರಮನೆಯಿಂದ ದೈವಗಳ ಭಂಡಾರ ಹೊರಟು ಇಲ್ಲಿ ಐದು ದಿನಗಳ ತನಕ ನೇಮೋತ್ಸವವು ನಡೆಯುತ್ತದೆ.
ಈ ಸಂದರ್ಭ ಎಕ್ಕಾರು ಶ್ರೀಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ, ಎಕ್ಕಾರು ಶ್ರೀಕೊಡಮಂತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವ), ನಡ್ಯೋಡಿ ಗುತ್ತು ಭಾಸ್ಕರ ಮುದ್ದ, ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ, ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದರು.
ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆಯು ಜನವರಿ 2ರಿಂದ ಆರಂಭಗೊಂಡಿದ್ದು, ಜನವರಿ 6 ರವರೆಗೆ ಜರುಗಿತು. ಇಂದು ಬೆಳಿಗ್ಗೆ ಧ್ವಜ ಅವರೋಹಣದೊಂದಿಗೆ ವರ್ಷಾವಧಿ ಜಾತ್ರೆಯು ಸಂಪನ್ನಗೊಳ್ಳಲಿದೆ.
PublicNext
09/01/2026 11:08 am
LOADING...