ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಸಿಹಿತ್ಲು ಶ್ರೀ ಭಗವತೀ ದೇವರಿಗೆ ವಿಜೃಂಭಣೆಯ ದೃಢ ಕಲಶ

ಮುಲ್ಕಿ: ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಭಾನುವಾರ ಶ್ರೀ ದೇವರಿಗೆ ದೃಢ ಸಂಪ್ರೋಕ್ಷಣೆ ಹಾಗೂ ಶ್ರೀ ನಾಗದೇವರಿಗೆ ವಾರ್ಷಿಕ ಆಶ್ಲೇಷಾಬಲಿ ಸೇವೆಯು ಶ್ರೀಪತಿ ಭಟ್ ಹೊಯ್ಗೆ ಗುಡ್ಡೆ ಹಾಗೂ ವೇದಮೂರ್ತಿ ವೆಂಕಟೇಶ ತಂತಿ ಎಡಪದವು ಪೌರೋಹಿತ್ಯದಲ್ಲಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಸಂಜೆ ವಾಸ್ತು ಹೋಮ, ವಾಸ್ತುಪೂಜೆ, ರಾಕ್ಷೋಘ್ನ ಪ್ರಾಕಾರ ಬಲಿ,ನಡೆಯಿತು ಭಾನುವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಶ್ರೀ ಭಗವತಿಯ ಸನ್ನಿಧಿಯಲ್ಲಿ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಪಂಚವಿಂಶತಿ ಕಲಶ, ಪ್ರಧಾನ ಹೋಮ, ಶ್ರೀ ದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಮಂತ್ರಾಕ್ಷತೆ, ನಾಗ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಆಶ್ಲೇಷಾ ಬಲಿ, ಪ್ರಸನ್ನಪೂಜೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ ಬಂಗೇರ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ, ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ ಶ್ರೀಯಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಬೆಲ್ಚಡ, ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಕರಿತೋಟ, ಕೋಶಾಧಿಕಾರಿ ಸುರೇಶ್ ಕೆ ಬಂಗೇರ, ಜೊತೆ ಕಾರ್ಯದರ್ಶಿ, ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/05/2026 07:37 pm

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ