ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿಯಲ್ಲಿ ಮತ್ತೆ ಮರಳು ಮಾಫಿಯಾದ ಅಟ್ಟಹಾಸ !

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಮರಳು ಮಾಫಿಯಾ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ.ಬಿ ಗ್ರಾಮದಲ್ಲಿ ಮರಳು ದಂಧೆಕೋರರು ಕೃಷ್ಣಾ ನದಿಯ ಒಡಲು ಬಗೆದು ಬಾಚುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗ್ತಾಯಿದ್ದಂತೆ ಮರಳು ದಂಧೆಕೋರರು ತಮ್ಮ ಕರಾಮತ್ತು ಮುಂದುವರೆಸಿದ್ದಾರೆ.‌

ಹಗಲು ರಾತ್ರಿ ಎನ್ನದೇ ರಾಜಾರೋಷವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ನೂರಾರು ಟ್ರಾಕ್ಟರ್ ಮೂಲಕ ಮರಳು ಸಾಗಾಟ ಮಾಡ್ತಾಯಿದ್ದಾರೆ.‌ ಹಗಲೊತ್ತಿನಲ್ಲೇ ನದಿಗೆ ಹಿಟಾಚಿ ಇಳಸಿ ಮರಳು ತುಂಬುತ್ತಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ‌ಮೌನಕ್ಕೆ ಶರಣಾಗಿದ್ದಾರೆ.

ಪೊಲೀಸ್, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಮರಳು ದಂಧೆ ನಡೀತಾಯಿದೆ ಎಂಬ ಆರೋಪ‌ ಕೇಳಿ ಬರ್ತಾಯಿದೆ. ಕೂಡಲೇ ಕೃಷ್ಣಾ ನದಿಯ ಒಡಲು ಬಗೆಯುತ್ತಿರುವ ಖದೀಮರ ವಿರುದ್ಧ ಪ್ರಕರಣ ದಾಖಲಿಸಿ, ದಂಧೆಗೆ ಮಟ್ಟ ಹಾಕಬೇಕಿದೆ.

Edited By :
PublicNext

PublicNext

21/01/2026 10:13 am

Cinque Terre

12.99 K

Cinque Terre

0