ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥರ ಪುರಪ್ರವೇಶ, ಭವ್ಯ ಶೋಭಾಯಾತ್ರೆ

ವಿಜಯಪುರ: ತಾಳಿಕೋಟಿ ನಗರೇಶ್ವರ ದೇವಸ್ಥಾನದ ಶತಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಮಂತ್ರಾಲಯ ರಾಘವೇಂದ್ರ ಮಠದ 55ನೇ ಯತಿವರ್ಯರಾದ ಶ್ರೀ ಸುಬುಧೇಂದ್ರ ತೀರ್ಥರ ಪುರಪ್ರವೇಶ ಹಾಗೂ ಭವ್ಯ ಶೋಭಾಯಾತ್ರೆ ಪಟ್ಟಣದಲ್ಲಿ ಜರುಗಿತು.

ಶ್ರೀಸುಬುಧೇಂದ್ರ ತೀರ್ಥರು ಪಟ್ಟಣಕ್ಕೆ ಆಗಮಿಸುತ್ತಿದಂತೆ ಭಕ್ತ ಸಮೂಹದವರು ಹೂ ಮಾಲೆ ಹಾಕುವುದರೊಂದಿಗೆ ಬರಮಾಡಿ ಕೊಂಡರಲ್ಲದೇ ಬೈಕ್ ಜಾಥಾದ ಮೂಲಕ ವಿಠಲ ಮಂದಿರದವರೆಗೆ ಆಗಮಿಸಿ ಶ್ರೀಗಳಿಗಾಗಿ ಸಿದ್ಧಪಡಿಸಲಾದ ಭವ್ಯ ರಥದಲ್ಲಿ ಕೂಡಿಸಿ ಮೆರವಣಿಗೆಯ ಮೂಲಕ ನಗರೇಶ್ವರ ದೇವಸ್ಥಾನದವರೆಗೆ ಕರೆತರಲಾಯಿತು.

ಮೆರವಣಿಗೆಯಲ್ಲಿ ಮಹಿಳೆಯರ ಕೋಲಾಟ ಹಾಗೂ ಬಳ್ಳಾರಿಯ ಲಕ್ಷ್ಮೀ ಚನ್ನಕೇಶವ ನಾಗಸ್ವರ ಗಟ್ಟಿ ಮೇಳ ಜನಮನ ಸೆಳೆಯಿತು.

ಶ್ರೀಗಳ ಭವ್ಯ ಮೆರವಣಿಗೆಯಲ್ಲಿ ಭಕ್ತ ಸಮೂಹ ಭಕ್ತಿಯ ಪರಾಕಾಷ್ಠೆಯಲ್ಲಿ ಶ್ರೀಪಾದಂಗಳವರ ತುಲಾಭಾರ, ಗ್ರಂಥ ಲೋಕಾರ್ಪಣೆ, ಶ್ರೀಗಳ ಆಶೀರ್ವಚನ ಜರುಗಿತ್ತಲ್ಲದೇ ನಂತರ ಸಮಸ್ತ ಭಕ್ತಾದಿಗಳಿಗೆ ಮಹಾ ಪ್ರಸಾದ ನಡೆಯಿತು.

Edited By : Manjunath H D
PublicNext

PublicNext

21/01/2026 04:26 pm

Cinque Terre

23.3 K

Cinque Terre

0