ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸೈಬರ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 1.32 ಕೋಟಿಗೂ ಅಧಿಕ ಹಣ ಜಪ್ತಿ

ವಿಜಯಪುರ: ವಿಜಯಪುರ ಸೈಬರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ಕ್ರೈಂ ಸರ್ಕಾರಿ ಯೋಜನೆ ದುರುಪಯೋಗ, ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬರೋಬ್ಬರಿ 1,32,38,183 ರೂಪಾಯಿ ಹಾಗೂ 2.40 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯಪುರ ನಗರದ ವ್ಯಾಪಾರಿಯೊಬ್ಬರಿಗೆ ದಿ ಓಕ್ಟಾ ಟ್ರೇಡಿಂಗ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ನಂಬಿಸಿ 2,04,71,500 ರೂಪಾಯಿ ಹಾಕಿಸಿಕೊಂಡಿದ್ದರು. ನಂತರ ಲಾಭಾಂಶವನ್ನೂ ಕೊಡದೇ ವಂಚನೆ ಮಾಡಿದ್ದರು. ಈ ಕುರಿತು ತನಿಖೆ ನಡೆಸಿದ ವಿಜಯಪುರ ಸೈಬರ್ ಪೊಲೀಸರು ನೊಂದ ದೂರುದಾರರಿಗೆ 1, 35,6400 ರೂಪಾಯಿ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಡಿವೋರ್ಸ್ ಮ್ಯಾಟ್ರಿಮನಿ ಮೂಲಕ ವೈದ್ಯರೊಬ್ಬರಿಗ ಪರಿಚಯ ಮಾಡಿಕೊಂಡು, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅವರಿಂದ ಎಂ.ಬಿಟ್‌ಕಾಯಿನ್.ವಿಟಿ.ಕಾಮ್ ನಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಲಾಭಾಂಶ ಮಾಡಿ ದೂರುದಾರರ ಸಾಲ ತೀರಿಸುವುದಾಗಿ ಹೇಳಿ 2,15,50,000 ಹಣ ವಂಚನೆ ಮಾಡಿದ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಂಚಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು 25.11ಲಕ್ಷ ರೂಪಾಯಿ ಆರೋಪಿತರಿಂದ ದೂರುದಾರರಿಗೆ ಮರಳಿಸಿದ್ದಾರೆ.

ಸರ್ಕಾರಿ ಚೆಕ್ ದುರುಪಯೋಗ: ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಂದಿನ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 25,55,183 ರೂಪಾಯಿಗಳನ್ನು ಸರ್ಕಾರದ ಖಾತೆಗೆ ಜಮಾ ಮಾಡಿಸಲಾಗಿದೆ. ಹೀಗೆ ವಿವಿಧ ಪ್ರಕರಣಗಳನ್ನು ಭೇದಿಸಿದ ವಿಜಯಪುರ ಸೈಬರ್ ಪೊಲೀಸರಿಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.

Edited By :
PublicNext

PublicNext

22/01/2026 08:38 am

Cinque Terre

18.97 K

Cinque Terre

0