ವಿಜಯಪುರ: ವಿಜಯಪುರದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಒಂದಿಲ್ಲೊಂದು ಎಡವಟ್ಟು, ಗೊಂದಲ ಸೇರಿದಂತೆ ಅನೇಕ ಕಾರಣಗಳಿಂದ ಆಗಾಗ ಸುದ್ದಿಯಲ್ಲಿ ಇರುತ್ತೆ. ಒಂದೇ ದಿನದಲ್ಲಿ ಡಿಡಿಪಿಐ ಕಛೇರಿಯ 14 ಜನ ಸಿಬ್ಬಂದಿಯನ್ನ ಎತ್ತಂಗಡಿ ಮಾಡಿ ಮತ್ತೆ ಸುದ್ದಿಗೆ ಬಂದಿದೆ.
ಹೌದು ! ವಿಜಯಪುರದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಲ್ಲಿ ದಿಢೀರನೆ ಒಂದೆ ದಿನದಲ್ಲಿ 14 ಜನ ಕಛೇರಿಯ ಸಿಬ್ಬಂದಿಯನ್ನ ಎತ್ತಂಗಡಿ ಮಾಡುವ ಮುಖಾಂತರ ಸದ್ದು ಮಾಡಿದೆ.
ಕಛೇರಿಯ ಕರ್ತವ್ಯದಲ್ಲಿ ವಿಳಂಬ ನೀತಿ, ಕಡತಗಳ ವಿಲೇವಾರಿಗೆ ವಿಳಂಬ, ಸಾರ್ವಜನಿಕ ವಿಲೇವಾರಿಗೆ ವಿಳಂಬ, ಭ್ರಷ್ಟಾಚಾರ ಹೀಗೆ ಅನೇಕ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಧಾರವಾಡದ ಅಪರ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರಿಂದ ಡಿಡಿಪಿಐ ಕಛೇರಿಯಲ್ಲಿ ಸಿಬ್ಬಂದಿಗಳಿಲ್ಲದೇ ಬಿಕೋ ಅನ್ನುತ್ತಿದೆ...
ಇನ್ನೂ ಆಡಳಿತ ಹಿತದೃಷ್ಟಿಯಿಂದ ಈ ನಿರ್ಣಯ ಮಾಡಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂತಸ ಪಟ್ಟಿದ್ದಾರೆ. ಆದ್ರೆ ಏಕಾಏಕಿ 14 ಜನರ ಎತ್ತಂಗಡಿ ಮಾಡಿದ ಕಾರಣ ತೊಂದರೆ ಆಗಿದೆ. ಇನ್ನೂ ಕೇವಲ ಎತ್ತಂಗಡಿ ಮಾಡಿದರೆ ಸಾಲದು ಇಲ್ಲಿ ಮಾಡಿದ ತಪ್ಪನ್ನು ಅವರು ಬೇರೆ ಸ್ಥಳಕ್ಕೆ ಅಲ್ಲಿ ಅದನ್ನು ಮುಂದುವರೆಸುತ್ತಾರೆ, ಇಂತವರಿಗೆ ಕೆಲಸದಿಂದ ಅಮಾನತ್ತು ಮಾಡಬೇಕು ಎಂಬ ಒತ್ತಾಯ ಕೂಡಾ ಕೇಳಿಬಂದಿದೆ.
ಒಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಲ್ಲಿ ಈ ಮಿಂಚಿನ ಎತ್ತಂಗಡಿ ಸಾರ್ವಜನಿಕ ವಲಯದಲ್ಲಿ ಒಂದೆಡೆ ಸಂತಸ ಮೂಡಿಸಿದೆ. ಆದ್ರೆ ಎತ್ತಂಗಡಿ ಆದ ಜಾಗಕ್ಕೆ ನಿಯೋಜನೆ ಆದ ಸಿಬ್ಬಂದಿ ಕೂಡ ಆದಷ್ಟು ಬೇಗ ಬಂದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.
PublicNext
23/01/2026 11:51 am
LOADING...