ವಿಜಯಪುರ: ರಾಜ್ಯದಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಮಾಡಲಾಗಿದೆ. ನಿತ್ಯ ಸಾವಿರಾರು ಮಹಿಳೆಯರು ಬಸ್ ಪ್ರಯಾಣ ಮಾಡುತ್ತಾರೆ. ಶಕ್ತಿ ಯೋಜನೆ ಜಾರಿ ಬಳಿಕ ಬಸ್ ನಲ್ಲಿ ನಿಲ್ಲೋಕು ಜಾಗವಿಲ್ಲದಂತಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮರ ತಂಡ ಮಹಿಳೆಯರ ಚಿನ್ನಕ್ಕೆ ಕನ್ನ ಹಾಕುತ್ತಿತ್ತು. ವಿಜಯಪುರ ಜಿಲ್ಲೆಯ ತಿಕೋಟಾ, ನಿಡಗುಂದಿ, ಬಬಲೇಶ್ವರ, ದೇವರ ಹಿಪ್ಪರಗಿ, ಗೋಲಗುಂಬಜ್ ಹಾಗೂ ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದವು.
ತನಿಖೆ ನಡೆಸಿದ ಪೊಲೀಸರು ಕಲಬುರ್ಗಿಯ ಪ್ರಶಾಂತ್ ಬೋಯ್ರ್, ಅಂಕುಶ್ ಜಾದವ್, ಗೋವರ್ಧನ ಪವಾರ್, ಭದ್ರಾವತಿಯ ರಜನಿ ಭೋವಿ, ಮಂಜು ಬೋಯ್ರ್ ಎಂಬ ಆರೋಪಿಗಳನ್ನು ಬಂಧಿಸಿದ್ದು ಶಿವು ಬೋವಿಗಾಗಿ ಹುಡುಕಾಟ ನಡೆಸಿದ್ದಾರೆ...
ಮಹಿಳೆಯರ ಚಿನ್ನಕ್ಕೆ ಕನ್ನ ಹಾಕುತ್ತಿದ್ದ ಖದೀಮರು ರಶ್ ಇರುವ ಬಸ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಒಂಟಿ ಮಹಿಳೆಯರು, ವಯಸ್ಸಾದವರನ್ನ ಟಾರ್ಗೆಟ್ ಮಾಡಿ ಅವರ ಜೊತೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದು ಅವರ ಬ್ಯಾಗ್, ಮೈಮೇಲಿದ್ದ ಒಡವೆಗಳನ್ನ ಎಗರಿಸಿ ಪರಾರಿಯಾಗುತ್ತಿದ್ದರು. ಬಸ್ ನಿಲ್ದಾಣ ಸಮೀಪದಲ್ಲಿದ್ದಾಗ ಅಥವಾ ಬಸ್ ಹತ್ತುವಾಗ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಮಹಿಳೆಯರಿಗೆ ಕುಳಿತು ಕೊಳ್ಳುಲು ಸೀಟ್ ಬಿಟ್ಟು ಕೊಡುವುದು. ಅವರ ಬಳಿಯ ಚೀಲ ಹಿಡಿಯುವುದು ಸೇರಿದಂತೆ ಮಹಿಳೆಯರು ಗಮನ ಸೆಳೆಯಲು ವಿವಿಧ ತಂತ್ರ ಅನುಸರಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಬಸ್ ನಲ್ಲಿ ಇದೇ ರೀತಿ ಕಳ್ಳತನ ಮಾಡುತ್ತಿದ್ದರು. ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿತರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ವಿಜಯಪುರ ಫೊಲೀಸರು ಖದೀಮರ ಹೆಡೆಮುರಿ ಕಟ್ಟಿದ್ದಾರೆ.
ಸದ್ಯ ಖದೀಮರ ಬಂಧನ ಬಳಿಕ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆಯರು ಕೂಡಾ ಬಸ್ ನಲ್ಲಿ ಸಂಚರಿಸುವಾಗ ಜಾಗೃತಿ ವಹಿಸಬೇಕು ಎಂಬುದು ನಮ್ಮ ಒತ್ತಾಯ...
PublicNext
24/01/2026 07:39 pm