ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ನಶಾ ಮುಕ್ತಿ ಕೇಂದ್ರದಲ್ಲಿ ವ್ಯಕ್ತಿ ಸಾವು : ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಆತ ಕಳೆದ ಕೆಲವು ವರ್ಷಗಳಿಂದ ಮಧ್ಯಪಾನಕ್ಕೆ ದಾಸನಾಗಿದ್ದ. ದುಶ್ಚಟ ಬಿಡಿಸಲು ಆತನ ಕುಟುಂಬ ಪರದಾಡುತ್ತಿತ್ತು. ಹೇಗಾದರೂ ಮಾಡಿ ಆತನಿಗೆ ಕುಡಿತದ ಚಟ ಬಿಡಿಸಬೇಕು ಎಂದುಕೊಂಡ ಕುಟುಂಬಸ್ಥರು ನಶಾ ಮುಕ್ತಿ ಕೇಂದ್ರಕ್ಕೆ ಸೇರಿಸಿದರು. ಅಲ್ಲಿ ಆತನಿಗೆ ಕುಡಿತದ ಚಟ ಬಿಡಿಸುವ ಬದಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು ಈಗ ಆತನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವೈಷ್ಣವಿ ವ್ಯಸನ ಮುಕ್ತಿ ಕೇಂದ್ರ ಸಿದ್ದು ಮುರಡಿ ಎಂಬ ಪೊಲೀಸ್ ಪೇದೆ ತನ್ನ ಹೆಂಡತಿಯ ಹೆಸರಿನಲ್ಲಿ ನಡೆಸುತ್ತಿದ್ದ, ಇನ್ನೂ ಕುಡಿತದ ದಾಸನಾಗಿದ್ದ ಹುಚ್ಚಪ್ಪ ಎಂಬಾತನಿಗೆ ಅಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಕೊಡುವ ಬದಲಿ ಅಲ್ಲಿನ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿದ್ದರಿಂದ ಹುಚ್ಚಪ್ಪ ಡೋಣೂರು ಸಾವನ್ನಪ್ಪಿದ್ದು ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ಮಧ್ಯವ್ಯಸನಿಗಳು ಮತ್ತು ವಿವಿಧ ದುಶ್ಚಟಗಳಿಗೆ ದಾಸರಾದವರಿಗೆ ಸರಿಯಾದ ಉಪಚಾರ ನೀಡದೆ ಹಿಂಸೆ ಮತ್ತು ಕ್ರೌರ್ಯದಿಂದ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಾವನ್ನಪ್ಪಿರುವ ಹುಚ್ಚಪ್ಪ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ...

ಇನ್ನೂ ಮೃತನ ಸಂಬಂಧಿಕರು ಆಸ್ಪತ್ರೆ ಎದುರು ಮೃತ ವ್ಯಕ್ತಿಯ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

ಇನ್ನು ಕಳೆದ ಕೆಲ ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಹುಚ್ಚಪ್ಪ ಡೋಣೂರು ಮದ್ಯಪಾನ ಚಟ ಬಿಡಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ಮಧ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ತಿಳಿದರೂ ಯುವ ಸಮುದಾಯ ದುಶ್ಚಟಗಳ ದಾಸರಾಗುತ್ತಿದ್ದು ಅಂತಹ ಚಟ ಬಿಡಿಸಲು ಹೋಗಿ ಸ್ವತಃ ಕುಟುಂಬಸ್ಥರೇ ತಮ್ಮ ಮಗನಿಗೆ ಚಟ್ಟ ಕಟ್ಟಿದಂತಾಗಿದೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ವ್ಯಸನ ಮುಕ್ತಿ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹಗಳು ಕೇಳಿ ಬಂದಿವೆ...

Edited By : Shivu K
PublicNext

PublicNext

24/01/2026 04:09 pm

Cinque Terre

16.72 K

Cinque Terre

0

ಸಂಬಂಧಿತ ಸುದ್ದಿ