ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಗುಂಡಿಗಳಿಂದ ದಾಖಲೆ ಬರೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ..

ವಿಜಯಪುರ: 18 ಗಂಟೆಯಲ್ಲಿ 26 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಲಾಗಿತ್ತು, ಆದರೆ ಅದೇ ರಸ್ತೆ ಇಂದು ತಗ್ಗು ಗುಂಡಿಗಳಿಂದ ದಾಖಲೆ ಮಾಡಿದೆ...

ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ 2021 ಫೆಬ್ರುವರಿ 25 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ಒಟ್ಟು 18 ಗಂಟೆಯಲ್ಲಿ ಬರೋಬ್ಬರಿ 26 ಕಿಲೋಮೀಟರ್ ರಸ್ತೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು.

ಈ ಚತುಷ್ಪತ ರಸ್ತೆ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಐಜೆಎಂ ಇಂಡಿಯಾ ಲಿಮಿಟೆಡ್ ಕಂಪನಿ ಹಾಗೂ ಡಿಆರ್‌ಎನ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 500 ಜನರು ಈ ಸಾಧನೆ ಗೈದಿದ್ದಾರೆ.

ವಿಜಯಪುರದಿಂದ ಸೊಲ್ಲಾಪುರದ ವರೆಗೆ 110 ಕಿಲೋಮೀಟರ್ ರಸ್ತೆ ನಿರ್ಮಾಣದ ಹೊಣೆಹೊತ್ತ ಐಜೆಎಂ ಇಂಡಿಯಾ ಲಿಮಿಟೆಡ್ ಗಿನ್ನೀಸ್ ದಾಖಲೆ ನಿರ್ಮಿಸಬೇಕು ಎಂದುಕೊಂಡು ವಿಜಯಪುರ ತಾಲೂಕಿನ ಕನ್ನಾಳದಿಂದ ಹೊರ್ತಿ ಮಧ್ಯದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು.

ಇದಕ್ಕೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಕೂಡ ಟ್ವಿಟ್ ಮಾಡಿ ಶುಭ ಕೋರಿದರು. ಆದರೆ ಇದೀಗ ರಸ್ತೆ ಗುಂಡಿಗಳಿಂದ ಹೊಸ ದಾಖಲೆ ಬರೆದಿದ್ದು ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.

ಇನ್ನು ವಿಜಯಪುರ ಸಂಸದರು ಜಿಲ್ಲೆಗೆ ಅದನ್ನು ತರುತ್ತೇನೆ, ಇದನ್ನು ಮಾಡುತ್ತೇನೆ ಎಂದು ಹೇಳುವುದನ್ನು ಬಿಟ್ಟು ಮೊದಲು ಗುಂಡಿ ಮುಚ್ಚಲಿ ಎಂದು ಸಚಿವ ಶಿವಾನಂದ ಪಾಟೀಲ್ ಸಂಸದ ರಮೇಶ ಜಿಗಜಿಣಗಿ ಕಾಲೆಳೆದಿದ್ದಾರೆ...

ಒಟ್ಟಿನಲ್ಲಿ ದಾಖಲೆ ಮಾಡುವ ಭರದಲ್ಲಿ ಕಳಪೆ ಕಾಮಗಾರಿ ಆಯಿತೇ ಗೊತ್ತಿಲ್ಲ. ಆದರೆ ಸದ್ಯ ಗುಂಡಿಗಳಿಂದ ದಾಖಲೆ ಬರೆಯುತ್ತಿರುವ ರಸ್ತೆಯ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಲಿ ಎನ್ನುವುದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ...

Edited By : Shivu K
PublicNext

PublicNext

24/01/2026 03:34 pm

Cinque Terre

28.11 K

Cinque Terre

0