ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ ಪೊಲೀಸರ ಹೊಸ ಲುಕ್: ಸಮವಸ್ತ್ರಕ್ಕೆ 'ಪೀ ಕ್ಯಾಪ್' ಮೆರುಗು!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಪೊಲೀಸರು ಇದೀಗ ಹೊಸ ಲುಕ್‌ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ಮಂಡ್ಯ ಜಿಲ್ಲಾ ಪೊಲೀಸರಿಗೆ ನೂತನ 'ಪೀ ಕ್ಯಾಪ್‌'ಗಳ ವಿತರಣೆ ಮಾಡಲಾಗಿದ್ದು, ಇದು ಅವರ ಸಮವಸ್ತ್ರಕ್ಕೆ ಹೊಸ ಮೆರುಗು ನೀಡಿದೆ. ಮಂಡ್ಯ ಎಸ್‌ಪಿ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಸ್ವತಃ ಎಸ್‌ಪಿ ಶೋಭಾರಾಣಿ ಅವರು ಪೊಲೀಸರ ತಲೆಗೆ ಕ್ಯಾಪ್‌ಗಳನ್ನು ಹಾಕುವ ಮೂಲಕ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ನಗರದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Edited By : Shivu K
PublicNext

PublicNext

25/01/2026 09:36 pm

Cinque Terre

25.84 K

Cinque Terre

0