ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಟಾನಿಕ್ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ

ಶಿವಮೊಗ್ಗ : ಭದ್ರಾವತಿ ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಾಂತಿ ಭೇದಿಯಾಗಿ ಅಸ್ವಸ್ಥರಾದ ಹಿನ್ನೆಲೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಊಟ ಆದ ಮೇಲೆ ನೀಡಿದ ರಕ್ತ ಅಭಿವೃದ್ಧಿಗೆ ನೀಡುವ ಟಾನಿಕ್ ನಿಂದ ಮಕ್ಕಳು ಅಸ್ವಸ್ಥವಾಗಿರುವುದಾಗಿ ಹೇಳಲಾಗುತ್ತಿದ್ದು, 6ನೇ ತರಗತಿ ಮಕ್ಕಳೇ ಹೆಚ್ಚು ಅಸ್ವಸ್ಥರಾಗಿದ್ದಾರೆ. 20 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಊಟದ ಮೇಲೆ ಮಕ್ಕಳಿಗೆ ರಕ್ತ ಅಭಿವೃದ್ಧಿಗಾಗಿ ಎಫ್ ಎಕ್ಸ್ ಟಾನಿಕ್ ನೀಡಬೇಕೆಂದು ಸರ್ಕಾರದ ಆದೇಶವಿದೆ.ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಟಾನಿಕ್ ನೀಡಿದ ಮೇಲೆ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Shivu K
PublicNext

PublicNext

27/01/2026 09:28 pm

Cinque Terre

13.27 K

Cinque Terre

0

ಸಂಬಂಧಿತ ಸುದ್ದಿ