ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತಲೆ ಕಳೆದು ಬೆಳಕು ನೀಡಿದ ಶರಣರಿಗೆ ಬೀದರ್‌ನಿಂದ ಭಾವಪೂರ್ಣ ನಮನ!

ಬೀದರ್: ಕತ್ತಲೆಯಲ್ಲಿದ್ದ ಸಮಾಜಕ್ಕೆ ವಚನ ಸಾಹಿತ್ಯವೆಂಬ ಬೆಳಕಿನ ದಿವೀಗೆಯನ್ನು ಕೊಟ್ಟಂತಹ ಕೀರ್ತಿ 12ನೇ ಶತಮಾನದ ಬಸವಾದಿ ಶರಣರಿಗೆ ಸಲ್ಲುತ್ತದೆ. ‌ಆ ಶರಣರ ಹೋರಾಟ ಹಾಗೂ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಬೀದರ್ ನಗರದಲ್ಲಿ 3 ದಿನಗಳ ಕಾಲ 24ನೇ ವಚನ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು‌ ಬಸವಗಿರಿಯ ಗಂಗಾಬಿಕಾ ಅಕ್ಕನವರು ತಿಳಿಸಿದ್ರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಣರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಕಳೆದ 23 ವರ್ಷಗಳಿಂದ ಬೀದರ್ ನಗರದಲ್ಲಿ ವಚನ ವಿಜಯೋತ್ಸವವನ್ನ ಅದ್ಧೂರಿಯಾಗಿ ಆಚರಿಸುತ್ತಾ ಬರುತ್ತಿದ್ದೇವೆ. ಅದೇ ರೀತಿ ಈ ವರ್ಷವೂ ವಿಜಯೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದೆ ಜನವರಿ 30, 31 ಹಾಗೂ ಫೆಬ್ರುವರಿ 1ರಂದು ಮೂರು ದಿನಗಳ ಕಾಲ ಬಸವಗಿರಿಯ ಆವರಣದಲ್ಲಿ ವಚನ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ‌ ಎಂದರು.

ಜನವರಿ 30ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮಧ್ಯಾಹ್ನ ಸ್ತ್ರೀ ಶಕ್ತಿ ಸಮಾವೇಶ ಹಾಗೂ ಸಾಯಂಕಾಲ ಶರಣ ಕಲಾವೈಭವ ನಡೆಯಲಿವೆ. ಜನವರಿ 31ರಂದು ಸಾಮೂಹಿಕ ವಚನ ಪಾರಾಯಣ, ಯುವ ಶಕ್ತಿ ಸಮಾವೇಶ, ವಿವಿಧ ಸಾಧಕರಿಗೆ ಸನ್ಮಾನ, ಧರ್ಮ ಚಿಂತನಗೋಷ್ಠಿ ನಡೆಯಲಿದೆ.

ಫೆಬ್ರುವರಿ 1ರಂದು ಬೀದರ್ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿಯವರೆಗೆ ಧರ್ಮ ಗ್ರಂಥ ವಚನಸಾಹಿತ್ಯದ ಮೆರವಣಿಗೆ. ವಚನ ಸಾಹಿತ್ಯದ ಪಟ್ಟಾಭಿಷೇಕ, ಗುರುಬಸವ ಪುರಸ್ಕಾರ ಹಾಗೂ ಶರಣ ಸೇವಾ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ರು.

Edited By : Manjunath H D
PublicNext

PublicNext

27/01/2026 10:49 pm

Cinque Terre

26.52 K

Cinque Terre

0