ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.‌ ಟ್ರಸ್ಟ್‌ನಿಂದ ಮಹಿಳಾ ವಿಚಾರಗೋಷ್ಠಿ

ಬೀದರ್: ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.‌ ಟ್ರಸ್ಟ್ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.

ಬೀದರ್ ಪಂಚಾಯತ್ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮಗೆ ಪರಮ ಪೂಜ್ಯ ಡಾ. ಡಿ.‌ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ.ಹೆಗ್ಗಡೆಯವರು ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಬದುಕು ಹೇಗೆ ಕಟ್ಟಿಕೊಳ್ಳಬೇಕು. ಹೇಗೆ ಜೀವನದಲ್ಲಿ ಸಾಗಬೇಕು. ಜೀವನದಲ್ಲಿ ಸುಖ ದುಃಖ ಸ್ತ್ರೀ ಪುರುಷರ ಸಮಾನ ಎಂದು ಮಾಹಿತಿ ನೀಡಿದರು.

ಜಿಲ್ಲಾ ನಿರ್ದೇಶಕ ಮುರಳಿಧರ್ ಎಚ್‌ ಎಲ್ ಮಾತನಾಡಿ, ಮಹಿಳೆಯರು ಸಬಲರಾಗಿರಬೇಕು. ಮಹಿಳೆಯರು ಮನೆಯಲ್ಲಿ ಇರಬೇಕು.

ಪುರುಷರು ಮಾತ್ರ ಕೆಲಸ ಮಾಡಬೇಕು ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಕುಟುಂಬದ ಜವಾಬ್ದಾರಿ ಅವರದೇ ಚಿಂತನೆ ಮಾಡಿ ಹೇಮಾವತಿ ವಿ. ಹೆಗ್ಗಡೆಯವರು ಬದುಕು ಹೇಗೆ ಕಟ್ಟಿಕೊಳ್ಳಬೇಕು.

ಮಕ್ಕಳಿಗೆ ಸಂಬಂಧ ತಿಳುವಳಿಕೆ ವಿದ್ಯೆ ಗೊತ್ತಿಲ್ಲದವರಿಗೆ ಒಂದೊಂದು ತಿಳುವಳಿಕೆ ಕೊಟ್ಟು ಆರ್ಥಿಕವಾಗಿ ಸಬಲರಾಗಬೇಕು. ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು. ಸ್ವಚ್ಛತೆ, ಆರೋಗ್ಯ, ಕೌಟುಂಬಿಕ ಸಾಮರಸ್ಯ, ಒಂದೊಂದು ತಿಂಗಳುಗಳಲ್ಲಿ ಒಂದು ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮಗಳು ನೀಡುವುದು.

ಮಹಿಳೆಯರು ಕೈಗಳು ಕೊಡುವರು ಆಗಿರಬೇಕು ನೀವು ಜೀವನದಲ್ಲಿ ಮುಂದುವರೆಯಬೇಕು ಬದುಕು ಕಟ್ಟಿಕೊಳ್ಳಬೇಕು. ಸ್ವಸಹಾಯ ಸಂಘದ ಸದಸ್ಯರ ಕಥೆ ಹೇಳುವ ಮೂಲಕ ಜೀವನದಲ್ಲಿ ನೀವು ಮುಂದುವರೆಯಬೇಕು ಬದುಕು ಕಟ್ಟಿಕೊಳ್ಳಬೇಕು. ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬೀದರ್ ಮಹಿಳಾ ಠಾಣೆಯ ಪಿಎಸ್‌ಐ ಮಲ್ಲಮ್ಮ ಮಾತನಾಡಿ, ಹೆತ್ತವರು ಮಕ್ಕಳಿಗೆ ಸಮಯಕೊಡಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯರಂತೆ ಮಹಿಳೆಯರು ಆಗಬೇಕು. ಇವತ್ತಿನ ದಿನದಲ್ಲಿ ಸಾಲ ಪಡೆಯುವ ಸದಸ್ಯರು ತಮಗೆ ಎಷ್ಟು ಅವಶ್ಯಕತೆ ಇದೆಯೋ ಸಾಮರ್ಥ್ಯ ನೋಡಿಕೊಂಡು ಹಣವನ್ನು ಬಳಕೆ ಮಾಡಿ ವ್ಯರ್ಥ ಮಾಡಿಕೊಳ್ಳಬೇಡಿ ತಿಳಿಸಿ ಕಾನೂನಿನ ಅರಿವಿನ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ, ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಿರ್ದೇಶಕ ಮುರಳಿಧರ್ ಎಚ್ ಎಲ್, ಸಂಪನ್ಮೂಲ ವ್ಯಕ್ತಿ ಸಂಗೀತ ಸಿರಂಜಿ, ತಾಲೂಕಿನ ಯೋಜನಾಧಿಕಾರಿ ಧರ್ಮೇಂದ್ರ ಎನ್ ಉಪಸ್ಥಿತರಿದ್ದರು.

Edited By : Abhishek Kamoji
PublicNext

PublicNext

01/02/2026 10:22 pm

Cinque Terre

10.7 K

Cinque Terre

0