ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : ಸಕ್ಕರೆ ನಾಡಿನಲ್ಲಿ ಕರಾಳ ದಿನ: ಹನುಮ ಧ್ವಜ ಇಳಿಸಿ 2 ವರ್ಷ ಪೂರ್ಣ

ಮಂಡ್ಯ : ಹನುಮ ಧ್ವಜ ಇಳಿಸಿ ಎರಡು ವರ್ಷ ಪೂರೈಸಿದ ಹಿನ್ನೆಲೆ ವಿವಾದಿತ ಮಂಡ್ಯದ ಕೆರಗೋಡಿನಲ್ಲಿ ಕರಾಳ ದಿನ ಆಚರಿಸಲಾಯ್ತು. ಕಳೆದ ಎರಡು ವರ್ಷಗಳ ಹಿಂದೆ‌ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಿಸಿದ್ದ ಅರ್ಜುನ ಸ್ತಂಭದಿಂದ ಹನುಮ ಧ್ವಜ ಕೆಳಗಿಳಿಸಿ ರಾಷ್ಟ್ರ ಧ್ವಜ ಹಾರಿಸಲಾಗಿತ್ತು.

ಈ ವೇಳೆ ಜಿಲ್ಲಾಡಳಿತದ ವಿರುದ್ಧ ಜನರು ದೊಡ್ಡಮಟ್ಟದ ಹೋರಾಟ ಮಾಡಿದ್ದರು. ಈ ಘಟನೆ ನಡೆದು ಎರಡು ವರ್ಷವಾದ್ದರಿಂದ ಕಳೆದ ರಾತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಅಲ್ಲದೆ ಹನುಮ ಧ್ವಜ ಇಳಿಸಿದ ಜಾಗದಲ್ಲೆ ಮುಂದೊಂದು ದಿನ ಹನುಮ ಧ್ವಜ ಹಾರಿಸುವ ಸಂಕಲ್ಪ ತೊಡಲಾಯ್ತು.

Edited By : Vinayak Patil
PublicNext

PublicNext

30/01/2026 07:47 am

Cinque Terre

13.15 K

Cinque Terre

0