ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಹನ ಬಿಡುಗಡೆಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ತುಮಕೂರು ಗ್ರಾಮಾಂತರ ಪಿಎಸ್ಐ ಚೇತನ್....

ತುಮಕೂರು : ಗೃಹಸಚಿವರ ತವರು ಜಿಲ್ಲೆ ತುಮಕೂರಲ್ಲಿ ಪೊಲೀಸರ ಮೇಲೆ ಹಿಡಿತವೇ ಇಲ್ಲವಾಗಿದ್ದು ಪೊಲೀಸ್ ಇಲಾಖೆಯಲ್ಲಿ ಲಂಚದಾಹ ಹೆಚ್ಚುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪ ಪುಷ್ಟೀಕರಿಸುವಂತೆ ತುಮಕೂರು ಗ್ರಾಮಾಂತರ ಠಾಣೆ ಪಿಎಸ್ಐ ಚೇತನ್ ಕುಮಾರ್ ವಾಹನ ಬಿಡುಗಡೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಪೊಲೀಸ್ ಠಾಣೆಯ ವಶದಲ್ಲಿ ಇದ್ದ  ವಾಹನ ಬಿಡುಗಡೆಗಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೇತನ್ ರವರು ಬೆಂಗಳೂರು ಮೂಲದ ವಕೀಲರೊಬ್ಬರಿಗೆ  40,000 ಹಣಕ್ಕೆ ಬೇಡಿಕೆ ಇಟ್ಟಿದ್ದರು. ಶನಿವಾರ ರಾತ್ರಿ 02:30 ರ ವೇಳೆ ತುಮಕೂರಿನ ಕ್ಯಾತ್ಸಂದ್ರ ಬಳಿಯ ನಮಸ್ತೆ ತುಮಕೂರು ಹೋಟೆಲ್ ಬಳಿ ರೂ. 40,000 ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಪಿಎಸ್ಐ ಚೇತನ್ ಹಾಗೂ ಹೋಟೆಲ್ ಸಿಬ್ಬಂದಿ ಒಬ್ಬರು ಲೋಕಾಯುಕ್ತ  ಅಧಿಕಾರಿಗಳ ದಾಳಿಯಲ್ಲಿ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೌರಾಣಿಕ ನಾಟಕದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದ ಚೇತನ್ ಕುಮಾರ್ ಲೋಕಾಯುಕ್ತ ಪೊಲೀಸರು ಹೆಣೆದ ಚಕ್ರವ್ಯೂಹಕ್ಕೆ ಬಿದ್ದಿರುವುದೇ ವಿಪರ್ಯಾಸ.

Edited By : Nirmala Aralikatti
PublicNext

PublicNext

31/01/2026 11:14 am

Cinque Terre

7.29 K

Cinque Terre

0