ನಂಜನಗೂಡು: ನಟ ದುನಿಯಾ ವಿಜಯ್ ಮತ್ತು ನಟಿ ರಚಿತಾ ರಾಮ್ ಅಭಿನಯಿಸಿರುವ ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ನಂಜನಗೂಡು ಛಲವಾದಿ ಮಹಾಸಭಾ ಬೆಂಬಲ ವ್ಯಕ್ತಪಡಿಸಿ, ಪ್ರತಿಯೊಬ್ಬರು ಚಿತ್ರವನ್ನು ವೀಕ್ಷಣೆ ಮಾಡುವಂತೆ ಬೃಹತ್ ಜಾಥಾ ನಡೆಸಿದರು.
ನಮ್ಮ ಜಾಥಾ ಸಿನಿಮಾಗಾಗಿ ಅಲ್ಲ, ಸಿನಿಮಾದ ಒಳಗಿರುವ ಸಂದೇಶಕ್ಕಾಗಿ ಎಂಬ ಶೀರ್ಷಿಕೆಯಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಅಭಿನಾಗಭೂಷಣ್ ತನ್ನ ಸ್ವಂತ ಖರ್ಚಿನಲ್ಲಿ ಮಧ್ಯಾಹ್ನದ ಶೋಗೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಚಿತ್ರ ವೀಕ್ಷಣೆ ಮಾಡಿಸಿದ್ದಾರೆ. ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಲ್ಯಾಂಡ್ ಲಾರ್ಡ್ ಚಿತ್ರದ ಸ್ತಬ್ಧ ಚಿತ್ರಕ್ಕೆ ಚಾಲನೆ ನೀಡಲಾಯಿತು.
ಸ್ತಬ್ಧ ಚಿತ್ರವು ನಂಜನಗೂಡಿನ ಎಂ.ಜಿ ರಸ್ತೆ ಮತ್ತು ಆರ್.ಪಿ ರಸ್ತೆಯ ಮೂಲಕ ನಗರದ ಭಾರ್ಗವಿ ಶ್ರೀ ವತ್ಸ ಥಿಯೇಟರ್ ತನಕ ಬೃಹತ್ ಮೆರವಣಿಗೆ ನಡೆಸಿ, ಲ್ಯಾಂಡ್ ಲಾರ್ಡ್ ಚಿತ್ರವನ್ನು ವೀಕ್ಷಣೆ ಮಾಡುವಂತೆ ತಿಳಿಸಿದರು. ಮೆರವಣಿಗೆಯಲ್ಲಿ ರೈತ ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಛಲವಾದಿ ಮಹಾಸಭಾ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರ ಭಾರ್ಗವಿ ಶ್ರೀವತ್ಸ ಚಿತ್ರಮಂದಿರದಲ್ಲಿ ಸುಮಾರು 500 ಜನರಿಗೆ ಚಿತ್ರ ವೀಕ್ಷಣೆ ಮಾಡಿದರು. ನಟ ದುನಿಯಾ ವಿಜಯ್ ರವರು ನಟಿಸಿರುವ ಲ್ಯಾಂಡ್ ಲಾರ್ಡ್ ಚಿತ್ರವನ್ನು ಪ್ರತಿಯೊಬ್ಬರು ವೀಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
Kshetra Samachara
31/01/2026 07:02 pm
LOADING...