ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ ಪ್ರಾದೇಶಿಕ ಮಟ್ಟದ ಜನ ಜಾಗೃತಿ ವೇದಿಕೆ ಸಭೆ

ಕಲಬುರಗಿ: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಾದೇಶಿಕ ಮಟ್ಟದ ಜನ ಜಾಗೃತಿ ವೇದಿಕೆ ಸಭೆ ನಡೆಯಿತು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ನಟರಾಜ್ ಬಾದಾಮಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಬಗ್ಗೆ ಮತ್ತು ಗ್ರಾಮ ಕಲ್ಯಾಣ ಮಾಡುವ ಕೆಲಸವನ್ನು ಪೂಜ್ಯರು ಮತ್ತು ಯೋಜನೆಯಿಂದ ನಡೆಯುತ್ತಾ ಇರುವುದು ಶ್ಲಾಘನೀಯ. ಪ್ರತಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ನಿಲ್ಲಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ವೇದಿಕೆ ಎಲ್ಲ ಸದಸ್ಯರು ಸಿದ್ಧರಿದ್ದಾರೆ ಎಂದರು

ಜನಜಾಗೃತಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಎಸ್ ಪಾಯಸ್, ಕಲಬುರಗಿ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Edited By : Abhishek Kamoji
PublicNext

PublicNext

01/02/2026 05:21 pm

Cinque Terre

6.36 K

Cinque Terre

0