ಶಿರಸಿ : ತೋಟಗಾರರು ಅಡಿಕೆ ತೋಟಗಳಲ್ಲಿ ಅಂತರ್ ಬೆಳೆ ಬೆಳೆಯಬೇಕು. ಅಂದಾಗ ಮಾತ್ರ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಬಾರದು. ಎಲೆಚುಕ್ಕಿ ರೋಗ ಮೊದಲು ಎಲೆಗಳಲ್ಲಿ ಕಂಡುಬರುತ್ತದೆ. ಅದಕ್ಕಾಗಿ ರೈತರು ಯಾವುದೇ ಒಂದು ಬೆಳೆಗೆ ರೋಗಬಾಧೆ ಕಂಡು ಬಂದಾಗ ಅದನ್ನುನಿರ್ಲಕ್ಷ್ಯ ಮಾಡದೇ ಅದರ ಕುರಿತು ಸರಿಯಾಗಿ ಅರ್ಥೈಸಿಕೊಂಡು ನಿರ್ವಹಣೆ ಮಾಡಬೇಕು ಎಂದು ವಿಜ್ಞಾನಿ ಡಾ.ವಿನಾಯಕ ಹೆಗಡೆ ಅವರು ರೈತರ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ - ಆತ್ಮ ಯೋಜನೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಜಿಲ್ಲಾ ಪಂಚಾಯತ, ಉತ್ತರ ಕನ್ನಡ, ಇವರ ಸಂಯುಕ್ತ ಆಶ್ರಯದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಫೆ.1 ರಿಂದ ಫೆ.3 ರವರೆಗೆ ಸಾವಯವ -ಸಿರಿಧಾನ್ಯ ಮೇಳವನ್ನು ಆಯೋಜನೆ ಮಾಡಲಾಗಿತ್ತು.
ಈ ಎಲೆಚುಕ್ಕಿ ರೋಗವನ್ನು ನಿಯಂತ್ರಿಸಲು ನಿರ್ಲದ್ದ, ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಕೆಲಕಡೆ ತಲಾ 6 ಎಕರೆ ತೋಟದಲ್ಲಿ ಎಲೆ ಚುಕ್ಕಿ ರೋಗಬಾಧೆಯನ್ನು ತಡೆಗಟ್ಟಲು ಅದರ ನಿರ್ವಹಣೆಯ ಪರೀಕ್ಷೆ ಮಾಡುತ್ತಿದ್ದೇವೆ. ಈಗ ನಮಗೆ ಅದರ ಫಲಿತಾಂಶ ಕಂಡು ಬಂದಿದೆ ಅಂತ ಮರಗಳನ್ನು ನಾವು ಮಾರ್ಕ ಮಾಡಿದ್ದೇವೆ ಎಂದು ಹೇಳಿದರು.
PublicNext
03/02/2026 05:02 pm
LOADING...