ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಅವ್ಯವಹಾರ ನಡೆದಿದ್ದರೆ ತನಿಖೆಯಾಗಲಿ - ಸುಂದರೇಶ್

ಶಿವಮೊಗ್ಗ : ಸೂಡಾದಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆಯಾಗಲಿ, ಬೇಡ ಎಂದವರು ಯಾರು ಆದರೆ, ಎಲ್ಲರ ಅಧ್ಯಕ್ಷರ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ. ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವ ಅಂಜಿಕೆಯೂ ನನಗಿಲ್ಲ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ಬರುವ ಮೊದಲೇ ಕಾಮಗಾರಿಗಳು ಮುಗಿದು ಹೋಗಿವೆ. ಕೆಲವು ಮಾತ್ರ ಉಳಿದಿದೆ ಅಷ್ಟೇ. ಪ್ರಸನ್ನಕುಮಾರ್ ಹೇಳಿದಂತೆ ಈಗಾಗಲೇ ಇದು ಲೋಕಾಯುಕ್ತ ತನಿಖೆಯಲ್ಲಿದೆ. ಲೋಕಾಯುಕ್ತರು ಖಂಡಿತ ತನಿಖೆ ಮಾಡುತ್ತಾರೆ. ಅವ್ಯವಹಾರವಾಗಿದ್ದರೆ ಶಿಕ್ಷೆಯಾಗಲಿ, ಬೇಡ ಎಂದವರು ಯಾರು? ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳನ್ನು ಮಾಡಿದ್ದಾರೆ. ಟೆಂಡರ್ ಕರೆಯುವುದು ಸೇರಿದಂತೆ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇವೆಲ್ಲವೂ ಪಾರದರ್ಶಕವಾಗಿ ನಿಯಮಬದ್ಧವಾಗಿ ನಡೆಯುತ್ತದೆ. ಆಕಸ್ಮಾತ್ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕಾಪಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಇದಕ್ಕೆ ನನ್ನ ಸಹಮತವೂ ಇದೆ ಎಂದರು.

Edited By : PublicNext Desk
PublicNext

PublicNext

03/02/2026 07:03 pm

Cinque Terre

3.58 K

Cinque Terre

0

ಸಂಬಂಧಿತ ಸುದ್ದಿ