ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದ ಶ್ರೀನಿವಾಸ್ ರಸ್ತೆಯ ನಿವಾಸಿ ಲೋಹಿತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳೆದ ಶನಿವಾರ ಹಾಗೂ ಭಾನುವಾರ ಮನೆಯಲ್ಲಿ ಯಾರು ಇರಲಿಲ್ಲ ಈ ಸಂದರ್ಭವನ್ನು ಗುರಿಯಾಗಿಸಿಟ್ಟುಕೊಂಡು ಖದೀಮರು ಮನೆಯ ಮುಂಭಾಗದ ಎರಡು ಬಾಗಿಲುಗಳ ಬೀಗ ಒಡೆದು ಮನೆಯೊಳಗಿನ ಕಪಾಟಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಸುಮಾರು 25,000 ದಿಂದ 30,000 ರೂಪಾಯಿ ನಗದು ಹಣ ಹಾಗೂ ದೇವರ ಮನೆಯ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದಾರೆ. ಮನೆಯ ಇತರ ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಿದಾಗ ಅವು ಸುರಕ್ಷಿತವಾಗಿರುವುದು ಕಂಡುಬಂದಿದೆ.
ಈ ಘಟನೆ ಕುರಿತು ಲೋಹಿತ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಕಳ್ಳರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Kshetra Samachara
03/02/2026 10:00 pm
LOADING...