ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ಮತ ಕೇಳಲು ಬರುವ ಮುನ್ನ ರಸ್ತೆ ಮಾಡಿ - ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಕಳಸ: ಕಾಫಿನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ಆದರೆ ಈ ಪ್ರಕೃತಿ ಸೌಂದರ್ಯದ ನಡುವೆಯೇ ಮಲೆನಾಡಿಗರು ಮೂಲಭೂತ ಸೌಲಭ್ಯಗಳಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ರಸ್ತೆ ದುರಸ್ತಿಗಾಗಿ ಪಂಚಾಯಿತಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರಸ್ತೆಗೆ ಜಲ್ಲಿ ಹಾಕಿ ಹೋದ ಗುತ್ತಿಗೆದಾರ ಆನಂತರ ನಾಪತ್ತೆಯಾಗಿದ್ದು, ಅಂದಿನಿಂದ ಇಂದಿನವರೆಗೆ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ.

ರಸ್ತೆ ಸಮಸ್ಯೆಯ ಜೊತೆಗೆ ಕುಡಿಯುವ ನೀರಿನ ಪೂರೈಕೆಯಲ್ಲೂ ಇಲ್ಲಿನ ಜನರು ತೀವ್ರ ತಾರತಮ್ಯ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’ ಯೋಜನೆಯಡಿ ಗ್ರಾಮಗಳಲ್ಲಿ ನೀರಿನ ಪೈಪ್‌ಗಳನ್ನು ಅಳವಡಿಸಿ ದೀರ್ಘಕಾಲ ಕಳೆದಿದ್ದರೂ, ಇಂದಿಗೂ ಮನೆಗಳಿಗೆ ನೀರು ತಲುಪಿಲ್ಲ. ಈ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯು ಇಲ್ಲಿ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ರಸ್ತೆ ಮತ್ತು ನೀರಿಗಾಗಿ ಹೈರಾಣಾಗಿರುವ ಗ್ರಾಮಸ್ಥರು ಈಗ ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಕ್ಷಣವೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು

ಒಟ್ಟಾರೆ ಪ್ರವಾಸಿಗರ ಪಾಲಿನ ಸ್ವರ್ಗದಂತಿರುವ ಈ ಕಾಫಿನಾಡಿನ ಹಳ್ಳಿಗಳು, ಸೌಲಭ್ಯಗಳ ವಿಚಾರದಲ್ಲಿ ಮಾತ್ರ ನರಕಸದೃಶವಾಗಿವೆ. ಆಶ್ವಾಸನೆಗಳ ಬೆನ್ನೇರಿ ಸುಸ್ತಾಗಿರುವ ಈ ಗ್ರಾಮಸ್ಥರ ತಾಳ್ಮೆ ಈಗ ಕಟ್ಟೆಯೊಡೆದಿದ್ದು ಚುನಾವಣಾ ಬಹಿಷ್ಕಾರದ ಕಿಚ್ಚು ಹತ್ತುವ ಮುನ್ನ ಆಡಳಿತ ವರ್ಗ ಎಚ್ಚೆತ್ತುಕೊಳ್ಳುವುದೇ ಎಂಬುದು ಸದ್ಯದ ಪ್ರಶ್ನೆ..

ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು

Edited By : Shivu K
PublicNext

PublicNext

03/02/2026 11:02 am

Cinque Terre

9.51 K

Cinque Terre

0

ಸಂಬಂಧಿತ ಸುದ್ದಿ