ಮುಲ್ಕಿ: ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ರಾಮನವಮಿಯಂದು ವಾರ್ಷಿಕ ರಥೋತ್ಸವವು ಶ್ರೀಸಂಸ್ಥಾನ ಶ್ರೀಕಾಶಿಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ 9ಕ್ಕೆ ಶ್ರೀವೆಂಕಟರಮಣ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12ಕ್ಕೆ ಮಹಾನೈವೇದ್ಯ ಮಂಗಳಾರತಿ, ಶ್ರೀದೇವರು ಯಜ್ಞಕ್ಕೆ ಹೊರಡುವ ಕಾರ್ಯಕ್ರಮ ನಡೆಯಿತು.
ಸಂಜೆ 3.45ಕ್ಕೆ ಯಜ್ಞ ಪೂರ್ಣಾಹುತಿ, 6.30ಕ್ಕೆ ಬ್ರಹ್ಮ ರಥಾರೋಹಣ, ದೈವ ದೇವರ ಭೇಟಿ,ಭೂರಿ ಸಮಾರಾಧನೆ, ರಾತ್ರಿ ಬ್ರಹ್ಮರಥದಲ್ಲಿ ಶ್ರೀ ದೇವರಿಗೆ ದೀಪ ನಮಸ್ಕಾರ, ಶ್ರೀನರಸಿಂಹ ಸ್ತುತಿ, ರಾತ್ರಿ ಪೂಜೆ, ಬ್ರಹ್ಮರಥೋತ್ಸವ, ವಿಶ್ರಾಂತಿಪೂಜೆ, ದೇವದರ್ಶನ ಸೇವೆ, ಚಂದ್ರ ಮಂಡಲ ಉತ್ಸವ, ವಸಂತ ಪೂಜೆ, ಏಕಾಂತ ಶಯನಪೂಜೆ ನಡೆಯಿತು
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
ಮಾ.28 ಶನಿವಾರ ಬೆಳಗ್ಗೆ ಗಂಟೆ 10ಕ್ಕೆ ಕವಾಟೋದ್ಘಾಟನೆ, ಸಂಜೆ ಗಂಟೆ 3.30ಕ್ಕೆ ಅವಭೃತ ಒಕುಳಿ ಉತ್ಸವ ನಡೆಯಲಿದೆ.
PublicNext
28/03/2026 10:00 am
LOADING...