ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸಮಾಜ ಸೇವೆ ಮೂಲಕ ಮಾನವೀಯ ಮೌಲ್ಯ - ಶಾಸಕ ಡಾ ವೈ ಭರತ್ ಶೆಟ್ಟಿ

ಸುರತ್ಕಲ್ : ಸಮಾಜ ಸೇವೆ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸೇವಾ ಸಂಸ್ಥೆಗಳು ಮಾದರಿ ಎಂದು ಶಾಸಕ ಡಾ ವೈ ಭರತ್ ಶೆಟ್ಟಿ ಹೇಳಿದರು.

ಅವರು ಸುರತ್ಕಲ್ ತಡಂಬೈಲ್ ವೀರಕೇಸರಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸಮಾರಂಭದಲ್ಲಿ ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರ ಶೇಖರ್ ನಾಣಿಲ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿಯ ಅಧ್ಯಕ್ಷ ಅಶೋಕ್ ಶೆಟ್ಟಿ ಸುರತ್ಕಲ್, ಚಲನಚಿತ್ರ ನಟ ಶನಿಲ್ ಗುರು, ಸತೀಶ್ ಮುಂಚೂರು, ಗಣೇಶ್ ಶೆಟ್ಟಿ, ಕಿರಣ್ ಶೆಟ್ಟಿ, ಜಯೇಶ್ ಗೋವಿಂದ, ಮಹಾಬಲ ಪೂಜಾರಿ ಕಡಂಬೋಡಿ, ವೀರಕೇಸರಿ ಸಂಸ್ಥೆಯ ಅಧ್ಯಕ್ಷ ಎಸ್ ಪದ್ಮನಾಭ ಕರ್ಕೇರ, ಸುಧಾಕರ್ ಸುರತ್ಕಲ್, ಕೈಲಾಸ್ ತಡಂಬೈಲ್, ಸುಕುಮಾರ್ ತಡಂಬೈಲ್ ಉಪಸ್ಥಿತರಿದ್ದರು.

ಕಾರ್ತಿಕ್ ಕುಲಾಲ್, ರಾಮಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ್ ಕೆ ಸುರತ್ಕಲ್ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Edited By : PublicNext Desk
PublicNext

PublicNext

03/04/2026 01:08 pm

Cinque Terre

2.86 K

Cinque Terre

0