ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹನುಮನಿಗೆ ಹುಲಿ ಕುಣಿತದ ಸೇವೆ!ರಜೆ ಸಿಕ್ಕಿದ್ದೇ ತಡ..ಬಣ್ಣ ಬಳಿದ ಮಕ್ಕಳ ಸೇನೆ

ಉಡುಪಿ: ಪರೀಕ್ಷೆ ಮುಗಿಸಿ ಫಲಿತಾಂಶ ಎದುರು ನೋಡುತ್ತಿರುವ ಮಕ್ಕಳು ಶಾಲೆಗೆ ರಜೆ ಸಿಕ್ಕಿದ್ದೇ ತಡ ಹುಲಿ ವೇಷ ಹಾಕಿ ಕುಣಿಯ ತೊಡಗಿದ್ದಾರೆ...!ಇಂದ್ರಾಣಿ ಶ್ರೀಮುಖ್ಯಪ್ರಾಣ ಮತ್ತು ಶ್ರೀನಾಗದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶದ ಹಿನ್ನೆಲೆಯಲ್ಲಿ ರಾಜಾಂಗಣ ಬಳಿಯಿಂದ ಇಂದ್ರಾಣಿ ಮುಖ್ಯಪ್ರಾಣ ಸನ್ನಿಧಿ ತನಕ ಹೊರೆ ಕಾಣಿಕೆ ಶೋಭಾ ಯಾತ್ರೆಯಲ್ಲಿ ಇಂದ್ರಾಳಿ ಜೂನಿಯರ್ ಟೈಗರ್ಸ್ ತಂಡ ಸದ್ದು ಮಾಡಿದೆ, ಮರಿ ಹುಲಿಗಳು ನೋಡುಗರ ಕಣ್ಮನ ಸೆಳೆದಿದ್ದಾರೆ.

ವಿಶೇಷವೆಂದರೆ ಮೂವರು ಹೆಣ್ಮಕ್ಕಳೂ ಹುಡುಗರ ಜತೆ ಗರ್ಜಿಸಲು ರೆಡಿಯಾಗಿದ್ದಾರೆ. ಇಂದ್ರಾಳಿ ಜೂನಿಯರ್ ಟೈಗರ್ಸ್ ತಂಡದ ನೇತೃತ್ವ ವಹಿಸಿದ ಸುಮಿತ್ ಅವರ ತಂದೆ ಮತ್ತು ಮಾವ ನಡೆಸುತ್ತಿದ್ದ ಇಂದ್ರಾಳಿ ಪಿಲಿಕುಲು ಟೀಂ ಅಸ್ತಿತ್ವ ಕಳೆದುಕೊಂಡಿತು.ಹೀಗಾಗಿ ಸುಮಿತ್ ಆರಂಭಿಸಿದ ಇಂದ್ರಾಳಿ ಜೂನಿಯರ್ ಟೈಗರ್ಸ್ ಕಳೆದ ಇಂದ್ರಾಳಿ ಚೌತಿಗೆ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿತು.

ಇಂದ್ರಾಳಿ ಜೂನಿಯರ್ ಟೈಗರ್ಸ್ ತಂಡದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ಪದವಿ ಮಕ್ಕಳಿದ್ದಾರೆ.ಚೌತಿಗೆ ಹುಲಿ ವೇಷ ಹಾಕಿದ ತಂಡ 1.70 ಲಕ್ಷ ರೂ. ಸಂಗ್ರಹಿಸಿದ್ದು ಖರ್ಚು ಕಳೆದು 20000ರೂ. ಉಳಿತಾಯಕ್ಕೆ ಶ್ರೀಮುಖ್ಯಪ್ರಾಣ ದೇವಳದಿಂದ ನೀಡಿದ 15000ರೂ. ಮೊತ್ತವನ್ನು ಈ ಬಾರಿ ಸ್ಪ್ರೇ ಪೈಂಟಿಗೆ ಬಳಸಲಾಗುತ್ತಿದೆ. ಸಾಲದಿದ್ದರೆ ದಾನಿಗಳ ನೆರವು ಪಡೆಯಲಾಗುತ್ತಿದೆ ಅಂತಾರೆ ಮಕ್ಕಳು.

ಈ ತಂಡ ಹೊರ ರಾಜ್ಯ, ಹೊರ ದೇಶದಲ್ಲೂ ಪ್ರದರ್ಶನ ನೀಡಬೇಕು. ಹುಲಿ ಸಂಸ್ಕೃತಿ ಉಳಿಸಬೇಕು, ಮಕ್ಕಳಿಗೆ ಕರಾವಳಿಯ ಜನಪದ ಸಂಸ್ಕೃತಿ ಪರಿಚಯಿಸಬೇಕೆನ್ನುವ ಇರಾದೆಯನ್ನು ತಂಡದ ಮುಖ್ಯಸ್ಥ ಸುಮಿತ್ ಹೊಂದಿದ್ದಾರೆ.

Edited By :
PublicNext

PublicNext

02/04/2026 06:27 pm

Cinque Terre

14.33 K

Cinque Terre

1