ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಪುಣೆಯಲ್ಲಿ ವರುಣನ ಅಟ್ಟಹಾಸ - ಒಂದೇ ಗಂಟೆಯಲ್ಲಿ ಭಾರೀ ಮಳೆ, ಜಲಾವೃತಗೊಂಡ ರಸ್ತೆಗಳು!

ಪುಣೆ: ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಗುರುವಾರ ಮಧ್ಯಾಹ್ನ ಸೂರ್ಯನ ಬಿಸಿಲಿನ ನಡುವೆಯೇ ವರುಣ ಅಬ್ಬರಿಸಿದ್ದಾನೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಸುರಿದ ಭಾರೀ ಮಳೆಯು ಮೇಘಸ್ಫೋಟದ ಅನುಭವ ನೀಡಿದ್ದು, ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಗರದ ವಿವಿಧ ಭಾಗಗಳಲ್ಲಿ ಅಲ್ಪ ಅವಧಿಯಲ್ಲಿ ದಾಖಲೆಯ ಮಳೆಯಾಗಿದೆ. ಅಂಕಿಅಂಶಗಳ ಪ್ರಕಾರ:

ಖಡಕ್ವಾಸಲ: 99 mm

ಸಿಂಹಗಡ ರಸ್ತೆ: 94.8 mm

ಕೋತ್ರುಡ್: 64.8 mm

ವಾರ್ಜೆ: 56.4 mm

ಶಿವಜಿನಗರ: 48.4 mm

ದಿಢೀರ್ ಮಳೆಯಿಂದಾಗಿ ಕೊಂಧ್ವಾ, ಹಡಪ್ಸರ್ ಮತ್ತು ಉತ್ತಮ ನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ವಾಹನ ಸವಾರರು ಹೈರಾಣಾದರು. ನೀರಿನ ರಭಸಕ್ಕೆ ಸಿಲುಕಿ ವಾಹನಗಳು ತೇಲುತ್ತಿರುವ ಮತ್ತು ಅರ್ಧ ಹೂತುಹೋಗಿರುವ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಗುರುವಾರ ಪುಣೆ, ನಾಸಿಕ್, ಜಲಗಾಂವ್ ಮತ್ತು ಅಹಿಲ್ಯಾನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.

ಶುಕ್ರವಾರ ಪರ್ಭಾನಿ ಮತ್ತು ಹಿಂಗೋಲಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಮುಂದುವರಿದಿದೆ. ಪುಣೆ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂಬೈ ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

Edited By : Nagaraj Tulugeri
PublicNext

PublicNext

02/04/2026 07:48 pm

Cinque Terre

78.3 K

Cinque Terre

0