ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನಕ್ಕೆ ಯುಎಇ ಬಿಗ್ ಶಾಕ್: ತಿಂಗಳಾಂತ್ಯಕ್ಕೆ 3.5 ಬಿಲಿಯನ್ ಡಾಲರ್‌ ಸಾಲ ವಾಪಸ್‌ಗೆ ಸೂಚನೆ

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್‌ಗೆ ಬೆಂಬಲ ನೀಡಿರುವ ಪಾಕಿಸ್ತಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬಿಗ್‌ ಶಾಕ್ ನೀಡಿದೆ.

ಹೌದು. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನವು ಯುಎಇಯಿಂದ 3.5 ಬಿಲಿಯನ್ ಡಾಲರ್‌ ಸಾಲ ಪಡೆದುಕೊಂಡಿತ್ತು. ಆದರೆ ಇರಾನ್ ಯುದ್ಧದ ವಿಚಾರದಲ್ಲಿ ಯುಎಇ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಬಿರುಕು ದೊಡ್ಡದಾಗುವ ಮುನ್ಸೂಚನೆಗಳು ದೊರೆಯುತ್ತಿದ್ದು ಇದೇ ತಿಂಗಳಾಂತ್ಯದ ಹೊತ್ತಿಗೆ ತನ್ನ ಹಣವನ್ನು ಪಾವತಿಸುವಂತೆ ಪಾಕಿಸ್ತಾನಕ್ಕೆ ಯುಎಇ ಹೇಳಿದೆ.

ಯುಎಇ ಇತ್ತೀಚೆಗೆ ಮಾಸಿಕ ರೋಲ್‌ಓವರ್ ಆಧಾರದ ಮೇಲೆ ಸಾಲದ ಅವಧಿಯನ್ನು ವಿಸ್ತರಿಸಿತ್ತು. ಲಭ್ಯವಿರುವ ವರದಿಗಳ ಪ್ರಕಾರ, ಪಾಕಿಸ್ತಾನವು ಏಪ್ರಿಲ್ ತಿಂಗಳೊಳಗೆ ಕಂತುಗಳ ಮೂಲಕ ಈ ಮೊತ್ತವನ್ನು ಮರುಪಾವತಿಸಲಿದೆ.

Edited By : Vijay Kumar
PublicNext

PublicNext

04/04/2026 05:39 pm

Cinque Terre

8.03 K

Cinque Terre

0

ಸಂಬಂಧಿತ ಸುದ್ದಿ