ವಿಜಯ್ ದೇವರಕೊಂಡ ಜೊತೆಗಿನ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಶಾಕ್; ಗುಡ್ ನ್ಯೂಸ್ ಕೊಟ್ಟರಾ ಶ್ರೀವಲ್ಲಿ.?
ನಮ್ಮ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಏನಾದರೂ ಪೋಸ್ಟ್ ಹಾಕಿದರೆ ಸಾಕು, ಅದು ಕ್ಷಣಾರ್ಧದಲ್ಲಿ ಟ್ರೆಂಡಿಂಗ್ ಆಗುತ್ತದೆ. ಆದರೆ ಇಂದು ಅವರು ಹಾಕಿರುವ ಪೋಸ್ಟ್ ಇಡೀ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ವಿಜಯ್ ದೇವರಕೊಂಡ ಜೊತೆ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ಈ ಜೋಡಿ, ಇದೀಗ "Now it's us three" ಈಗ ನಾವು ಮೂವರು ಎಂಬ ಕ್ಯಾಪ್ಷನ್ ನೀಡಿ ಒಂದು ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು "ಅರೆ! ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಸಿಕ್ಕಿಬಿಟ್ಟಿತಾ?" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಏನಿದೆ ಆ ವಿಡಿಯೋದಲ್ಲಿ?
ರಶ್ಮಿಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ಆನಿಮೇಟೆಡ್ ಹಾರ್ಟ್ ಎಮೋಜಿಗಳು ಮತ್ತು ಹಳದಿ ಬಣ್ಣದ ಸನ್ ಫ್ಲವರ್ ಕಾಣಿಸಿಕೊಂಡಿದೆ. ರಶ್ಮಿಕಾ ಮತ್ತು ವಿಜಯ್ ಜೊತೆಗೆ ಈ ಪುಟ್ಟ ಹೂವಿನ ಚಿತ್ರ ಇರುವುದನ್ನು ಕಂಡು, "ಇದು ಜೂನಿಯರ್ ರಶ್ಮಿಕಾ ಅಥವಾ ಜೂನಿಯರ್ ವಿಜಯ್ ಬರುವ ಮುನ್ಸೂಚನೆಯೇ?" ಎಂದು ಫ್ಯಾನ್ಸ್ ಕಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದಾರೆ.
ಕೆಲವು ನೆಟ್ಟಿಗರು "ಕಂಗ್ರಾಜುಲೇಷನ್ಸ್ ಮಮ್ಮಿ ರಶ್ಮಿಕಾ" ಎಂದು ಈಗಲೇ ಹಾರೈಸಲು ಶುರು ಮಾಡಿದ್ದಾರೆ! ವಾಸ್ತವವೇ ಬೇರೆ ಇರಬಹುದೇ?ಆದರೆ ಈ 'ಮೂರನೇ ಅತಿಥಿ' ಕೇವಲ ಒಂದು ಆನಿಮೇಟೆಡ್ ಸರಣಿಯ ಭಾಗವಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಟೆರಿಬ್ಲಿ ಟೈನಿ ಟೇಲ್ಸ್ ಸಹಯೋಗದಲ್ಲಿ 'Rashmika & Ru' ಎಂಬ ಹೊಸ ಆನಿಮೇಟೆಡ್ ಪ್ರಾಜೆಕ್ಟ್ ಶುರುವಾಗುತ್ತಿದ್ದು, ಇಲ್ಲಿ 'Ru' ಎಂಬ ಪಾತ್ರವೇ ಆ ಮೂರನೇ ಸದಸ್ಯ ಎನ್ನಲಾಗುತ್ತಿದೆ. ಏನೇ ಇರಲಿ, ರಶ್ಮಿಕಾ ಅವರ ಈ ಒಂದು ಸಣ್ಣ ಕ್ಯಾಪ್ಷನ್ ಮಾತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಈಗ ಹಾಟ್ ಟಾಪಿಕ್..
PublicNext
04/04/2026 07:08 am