ಬೆಂಗಳೂರು : ಏಪ್ರಿಲ್ 1ರಂದು ಸುದ್ದಿಗೋಷ್ಠಿ ಕರೆದಿದ್ದಕ್ಕೆ ಎಲ್ಲರಲ್ಲೂ ಸ್ವಲ್ಪ ಗೊಂದಲ ಉಂಟಾಗಬಹುದು. ಸಾಮಾನ್ಯವಾಗಿ ಈ ದಿನವನ್ನು ‘ಮೂರ್ಖರ ದಿನ’ ಎಂದು ಕರೆಯಲಾಗುತ್ತದೆ. ಆದರೆ, ಈ ದಿನವನ್ನು ‘ಇಂಟೆಲಿಜೆನ್ಸ್ ಡೇ’ ಆಗಿ ರೂಪಾಂತರಿಸೋಣ ಎಂಬ ಸಂದೇಶವನ್ನು ಉಪೇಂದ್ರ ನೀಡಿದರು.
ಪ್ರತಿಯೊಬ್ಬರ ಜೀವನದಲ್ಲೂ ಯಾರಾದರೂ ಒಬ್ಬರ ಮೇಲೆ ಅವಲಂಬಿತರಾಗಿರುತ್ತೇವೆ. ಆದರೆ, ಹೀಗೆ ಇರಬಾರದು. ಪ್ರತಿಯೊಬ್ಬರೂ ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಅನುಭವವನ್ನು ಹಂಚಿಕೊಂಡ ಉಪೇಂದ್ರ, “ನಾನು ಮೊದಲು ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದೆ. ಅವರು ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ಟಿಕೆಟ್ ನೀಡುವ ವಿಷಯ ಬಂದಾಗ, ಅದನ್ನು ನಾವು ತೀರ್ಮಾನಿಸುತ್ತೇವೆ ಎಂದು ಹೇಳಿದರು. ಆ ಕಾರಣದಿಂದ ನಾನು ಅಲ್ಲಿಂದ ಹೊರಬಂದು, ನನ್ನದೇ ದಾರಿಗೆ ನಡೆದೆ,” ಎಂದು ತಿಳಿಸಿದರು.
“ಅಲ್ಲಿಂದ ಹೊರಬಂದ ನಂತರ ‘ಪ್ರಜಾಕೀಯ’ವನ್ನು ಪ್ರಾರಂಭಿಸಿ, ಟಿಕೆಟ್ ನೀಡುವ ವ್ಯವಸ್ಥೆಯನ್ನೇ ಬದಲಾಯಿಸಲು ಪ್ರಯತ್ನಿಸಿದೆ,” ಎಂದು ಉಪೇಂದ್ರ ಹೇಳಿದರು.
PublicNext
02/04/2026 01:13 pm
LOADING...