ಬೆಂಗಳೂರು : ಬೆಂಗಳೂರಿನ ರಸ್ತೆಗಳಲ್ಲಿ ಸದಾ ಹಸಿರು-ಹಳದಿ ಬಣ್ಣದ ಆಟೋಗಳದ್ದೇ ಅಬ್ಬರ. ಆದರೆ ಕಳೆದ ಕೆಲವು ದಿನಗಳಿಂದ ಈ ಅಬ್ಬರ ಗ್ಯಾಸ್ ಬಂಕ್‌ಗಳ ಮುಂದೆ ಸದ್ದಿಲ್ಲದೆ ಸಾಲುಗಟ್ಟಿ ನಿಂತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವೋ ಏನೋ, ಇಲ್ಲಿನ ಆಟೋ ಚಾಲಕರ ಬದುಕು ಮಾತ್ರ ಬೀದಿಗೆ ಬಂದಿದೆ.
ಯಶವಂತಪುರದಿಂದ ಹಿಡಿದು ಮೈಸೂರು ರಸ್ತೆಯವರೆಗೆ ಎಲ್ಲಿ ನೋಡಿದರೂ ಎರಡು ಕಿಲೋಮೀಟರ್‌ವರೆಗಿನ ಉದ್ದನೆಯ ಕ್ಯೂಗಳು! ಬೆಳ್ಳಂಬೆಳಗ್ಗೆ ಬಂದು ಸಾಲಿನಲ್ಲಿ ನಿಂತರೂ ಕೇವಲ 400 ರೂಪಾಯಿಯ ಗ್ಯಾಸ್ ಮಾತ್ರ ಸಿಗುತ್ತಿದೆ. "ಗ್ಯಾಸ್ ಹುಡುಕುತ್ತಲೇ ಇರುವ ಅಲ್ಪಸ್ವಲ್ಪ ಇಂಧನವೂ ಖಾಲಿಯಾಗುತ್ತಿದೆ" ಎನ್ನುವ ಚಾಲಕರ ಅಳಲು ಕೇಳುವವರಿಲ್ಲದಂತಾಗಿದೆ.
PublicNext
04/04/2026 12:56 pm
LOADING...