ಬೆಂಗಳೂರು : ನಗರದ ರಸ್ತೆಗಳಲ್ಲಿ ಸದಾ ಹಸಿರು-ಹಳದಿ ಆಟೋಗಳ ಸದ್ದು ಕೇಳಿಸುತ್ತಿತ್ತು. ಆದರೆ ಈಗ ಆ ಸದ್ದು ಗ್ಯಾಸ್ ಬಂಕ್‌ಗಳ ಮುಂದೆ ಮೌನ ಸಾಲಾಗಿ ಬದಲಾಗಿದೆ.
ಕಳೆದ ಕೆಲವು ದಿನಗಳಿಂದ ಗ್ಯಾಸ್ ಕೊರತೆ ತೀವ್ರವಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ, ಬೆಂಗಳೂರು ಆಟೋ ರಿಕ್ಷಾ ಚಾಲಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಯಶವಂತಪುರದಿಂದ ಮೈಸೂರು ರಸ್ತೆಯವರೆಗೆ ಎಲ್ಲಿ ನೋಡಿದರೂ ಎರಡು ಕಿಲೋಮೀಟರ್‌ವರೆಗೆ ಉದ್ದನೆಯ ಸಾಲುಗಳು! ಬೆಳ್ಳಂಬೆಳಗ್ಗೆ ಬಂದು ನಿಂತರೂ, ಕೇವಲ 400 ಮೌಲ್ಯದ ಗ್ಯಾಸ್ ಮಾತ್ರ ಸಿಗುತ್ತಿದೆ. ಗ್ಯಾಸ್ ಹುಡುಕುತ್ತಲೇ ಇರುವಷ್ಟು ಇಂಧನವೂ ಖಾಲಿಯಾಗುತ್ತಿದೆ. ಒಂದು ಸವಾರಿ ಮಾಡೋದಕ್ಕೂ ಕಷ್ಟವಾಗುತ್ತಿದೆ.
ಇತ್ತ ಪಂಪ್ ಸಿಬ್ಬಂದಿಯ ಮಾತು ಊಟಕ್ಕೆ 20 ನಿಮಿಷ ಬಿಡುವು ಸಿಗೋದೇ ಕಷ್ಟ. ಅಷ್ಟರ ಮಟ್ಟಿಗೆ ಒತ್ತಡ ಇದೆ” ಅಂತ ಹೇಳಿದ್ದಾರೆ. ಈ ಮಿನಿಸ್ಟರ್‌ಗಳು ವೋಟ್ ಟೈಮ್‌ಗೆ ಬರ್ತಾರೆ.. ವೋಟ್ ಕೇಳ್ತಾರೆ. ಬರ್ಲಿ ಇನ್ನು ವೋಟ್ ಹಾಕಲ್ಲ ಅಂದಿದ್ದಾರೆ ಆಟೋ ಚಾಲಕ.
PublicNext
04/04/2026 12:44 pm
LOADING...