ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ಯಾಸ್ ಗೋಸ್ಕರ ಆಟೋ ಚಾಲಕರಿಗೆ ಕಿತ್ತಾಟ..!

ಬೆಂಗಳೂರು: ನಗರದ ರಸ್ತೆಗಳಲ್ಲಿ ಸದಾ ಹಸಿರು-ಹಳದಿ ಆಟೋಗಳ ಸದ್ದು ಕೇಳಿಸುತ್ತಿರುತ್ತೆ. ಆದರೆ ಈಗ ಆ ಸದ್ದು ಗ್ಯಾಸ್ ಬಂಕ್‌ಗಳ ಮುಂದೆ ಮೌನ ಸಾಲಾಗಿ ಬದಲಾಗಿದೆ.

ಕಳೆದ ಕೆಲವು ದಿನಗಳಿಂದ ಗ್ಯಾಸ್ ಕೊರತೆ ತೀವ್ರವಾಗಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಬೆಂಗಳೂರಿನ ಆಟೋ ಚಾಲಕರ ಬದುಕಿನ ಮೇಲೆ ಸ್ಪಷ್ಟವಾಗಿ ಬೀಳುತ್ತಿದೆ.

ಯಶವಂತಪುರದಿಂದ ಮೈಸೂರು ರಸ್ತೆಯವರೆಗೆ ಎಲ್ಲಿ ನೋಡಿದರೂ ಎರಡು ಕಿಲೋಮೀಟರ್‌ವರೆಗೆ ಉದ್ದನೆಯ ಸಾಲುಗಳು ಕಾಣಿಸುತ್ತಿವೆ. ಬೆಳ್ಳಂಬೆಳಗ್ಗೆ ಬಂದು ಸಾಲಿನಲ್ಲಿ ನಿಂತರೂ, ಕೇವಲ ₹400 ಮೌಲ್ಯದ ಗ್ಯಾಸ್ ಮಾತ್ರ ಸಿಗುತ್ತಿದೆ ಎಂಬುದು ಚಾಲಕರ ಬೇಸರ.

500 ದುಡಿದ್ರೆ, 400 ಗ್ಯಾಸ್‌ಗೆ ಹೋದ್ರೆ ಹೆಂಡ್ತಿ ಮಕ್ಕಳನ್ನು ಹೇಗೆ ಸಾಕೋದು?” ಎನ್ನುವ ಚಾಲಕರ ನೋವು ಮನ ಕಲುಕುತ್ತದೆ. ಗ್ಯಾಸ್ ಹುಡುಕುತ್ತಲೇ ಇರುವಷ್ಟು ಇಂಧನವೂ ಖಾಲಿಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.ಆಟೋ ಚಾಲಕರ ಈ ಸಂಕಷ್ಟಕ್ಕೆ ಪರಿಹಾರವೇನು? ಇವರ ಅಳಲು ಕೇಳೋವರು ಯಾರೂ ಇಲ್ಲವೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

Edited By :
PublicNext

PublicNext

04/04/2026 01:04 pm

Cinque Terre

6.96 K

Cinque Terre

1