ಇಸ್ಲಾಮಾಬಾದ್ : ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲದ ಹೊರೆಯಿಂದ ಹೊರಬರಲು ಪರದಾಡುತ್ತಿದೆ. ಈ ನಡುವೆ, ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ರಕ್ಷಣಾ ಒಪ್ಪಂದಗಳನ್ನು ಗೌರವಿಸದ ಹಾಗೂ ಇರಾನ್ ವಿರುದ್ಧದ ಯುದ್ಧದಲ್ಲಿ ಸೌದಿ ಅರೇಬಿಯಾಕ್ಕೆ ಸಹಾಯ ಮಾಡಿದ್ದಕ್ಕಾಗಿ ಸೌದಿ ಅರೇಬಿಯಾವು ಪಾಕಿಸ್ತಾನದಿಂದ ತನ್ನ 6.3 ಬಿಲಿಯನ್ ಅಮೆರಿಕನ್ ಡಾಲರ್ (USD) ಸಾಲವನ್ನು ಮರುಪಾವತಿ ಮಾಡುವಂತೆ ಈಗಾಗಲೇ ಕೇಳಿತ್ತು.
ಇದೀಗ, ಈ ಬೆಳವಣಿಗೆಯ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೂಡ ತಿಂಗಳ ಅಂತ್ಯದ ಮೊದಲು 3.5 ಶತಕೋಟಿ ಡಾಲರ್ ಹಣವನ್ನು ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಮಾಧ್ಯಮದ ವರದಿ ಪ್ರಕಾರ ಶೀಘ್ರದಲ್ಲೆ ಈ ದೊಡ್ಡ ಮೊತ್ತವನ್ನು ಹಿಂದಿರುಗಿಸಲು ಪಾಕ್ ಸಜ್ಜಾಗಿದೆ ಎಂದು ಹೇಳಿದ್ದಾರೆ.
PublicNext
04/04/2026 11:29 am
LOADING...